ನಮಸ್ತೆ,
ಪದ ತಂತ್ರಾಂಶ ಆವೃತ್ತಿ 4.0 ಬಿಡುಗಡೆ ಮಾಡಿ ಇಂದಿಗೆ ಆರನೇ ದಿನ. ಪದ ತಂತ್ರಾಂಶವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದ ಕನ್ನಡಿಗರಿಗೆ ಚೆನ್ನಾಗಿ ಗೊತ್ತು ಅದೇನೆಂದರೆ ಆವೃತ್ತಿ 4.0 ಪದ ತಂತ್ರಾಂಶದ ಇಲ್ಲಿವರೆಗಿನ ಅತ್ಯುತ್ತಮ ಅವೃತ್ತಿ ಎಂದು.
ಪದ IME, ಪದಕೋಶ ಹಾಗೂ ಪದ ಎಡಿಟರ್ ಎಲ್ಲವನ್ನೂ ಒಟ್ಟು ಸೇರಿಸಿ, ಪದ-ತಂತ್ರಾಂಶ-ಕನ್ನಡ-4.0 ಯನ್ನು ಬಿಡುಗಡೆಮಾಡಲಾಗಿತ್ತು. ಕೆಲವರಿಗೆ ಈಗಾಗಲೇ install ಮಾಡಿಕೊಂಡಿದ್ದ Anti-Virus Software ನ ಸಮಸ್ಯೆಯಿಂದಾಗಿ 3rd party ತಂತ್ರಾಂಶಗಳನ್ನು install ಮಾಡಲು ಬಿಡುತ್ತಿರಲಿಲ್ಲ. ಮತ್ತೆ ಕೆಲವರು ಪದ ತಂತ್ರಾಂಶವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡು ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಇತರ ಬೇರೆ ಗಣಕಗಳಲ್ಲಿ ಬಳಸಲು ಪ್ರಯತ್ನಿಸುವವರಿರುವರು. ಇಲ್ಲಿ ಪದ ತಂತ್ರಾಂಶವನ್ನು install ಮಾಡಿಕೊಳ್ಳಲು ಆಗದೇ ಇರುವಂತಹ ಸಂದರ್ಭದಲ್ಲಿಯೂ ಪದ-ತಂತ್ರಾಂಶವನ್ನು ಉಪಯೋಗಿಸಲು ಅನುವು ಮಾಡಿಕೊಡುವ ಸಲುವಾಗ portable ಅಥವಾ zipped ಆವೃತ್ತಿಯನ್ನೂ ಬಿಡುಗಡೆ ಮಾಡಬೇಕಾಗಿ ಬಂತು.
ಗಣಕದಲ್ಲಿ ಹೊಸದಾಗಿ ಕನ್ನಡ ಅಥವಾ ಇತರೆ ಭಾರತೀಯ ಭಾಷೆಗಳನ್ನು ಬರೆಯಲು ಆರಂಬಿಸುವವರಿಗೆ ಹೆಚ್ಚು ಅನುಕಾಲವಾಗಲಿ ಎಂದು ಕೀಲಿಮಣೆ-ವಿನ್ಯಾಸದ ಸಹಾಯವನ್ನು ಸೇರಿಸಲಾಗಿದೆ. ನಿಮ್ಮದೇ ಒಂದು ದೊಡ್ಡ “ಪದಪಟ್ಟಿ” (word list) ಇದ್ದು ಅದನ್ನು ಪದ ತಂತ್ರಾಂಶದ ಪದ-ಪರೀಕ್ಷಕ (spell-check-engine) ಎಂಜಿನ್‌ಗೆ ಅಳವಡಿಸಲು ಅನುವಾಗಲೆಂದು ಒಂದು ಹೊಸ ಸವಲತ್ತನ್ನೂ ಸೇರಿಸಲಾಗಿದೆ. ಇದೇ ರೀತಿ ಇನ್ನೂ ಹಲವು ಅನುಕೂಲತೆಗಳನ್ನು ಸೇರಿಸಲಾಗಿದ್ದು, ನಿಮಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನವನ್ನು 4.0 ಆವೃತ್ತಿಯಲ್ಲಿ ಮಾಡಲಾಗಿದೆ. ಈ ಲೇಖನವನ್ನು ಸಂಪೂರ್ಣ ಪದ-IME ಇಂದಲೇ ಬರೆಯಲಾಗಿದೆ. ಕನ್ನಡ-ಕೆ.ಪಿ.ರಾವ್ ಲೇಔಟ್‌ನ್ನು ನಾವು ಹೆಚ್ಚು ಬಳಸುತ್ತೇವೆ. ಹಾಗಂತ photetic ಲೇಔಟ್ ಪಕ್ಕ ಸರೀ ಇಲ್ಲ ಎಂದಲ್ಲ, ಎಲ್ಲವನ್ನೂ ಪರೀಕ್ಷಿಸಿ, ದೃಡಪಡಿಸಿಕೊಂಡ ಮೇಲೆಯೇ ತಂತ್ರಾಂಶವನ್ನು ಬಿಡುಗಡೆಮಾಡಲಾಗಿದೆ. ಧೈರ್ಯವಾಗಿ ಬಳಸಲು ಆರಂಬಿಸಿ. ತೊಂದರೆಗಳು ಎದುರಾದಲ್ಲಿ ನಮಗೆ ತಿಳಿಸಿ.
ಒಟ್ಟಾರೆ ಇಲ್ಲಿಯವರೆಗೆ ಎಲ್ಲಾ ಬೆಳವಣಿಗೆಗಳು ಪದ-ತಂತ್ರಾಂಶದ ಪರವಾಗಿಯೇ ಕೆಲಸ ಮಾಡಿದ್ದು, ಇದೀಗ ಕೇವಲ 45 ದಿನಗಳೊಳಗೆ 1000 ಡೌನ್‌ಲೋಡ್‌ಗಳನ್ನೂ ದಾಟಿದೆ. ಈಗ 2000 ದ ಗಡಿಯ ಗುರಿಯನ್ನು ಬೆನ್ನತ್ತಿದೆ. 🙂 ಇಂತಹ ಶುಭ ಸುದ್ದಿಗೆ ಕಾರಣರಾದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೆರವಾದ ಸಮಸ್ತರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಲಿಚ್ಚಿಸುತ್ತೇವೆ.
ನಿಮ್ಮ ಪ್ರೀತಿಗೆ, ಪ್ರೋತ್ಸಾಕಕ್ಕೆ ಬಹುಶಃ ಯಾರಿಂದಲೂ ಬೆಲೆಕಟ್ಟಲಾದು. ಕವಿಗಳು-ಸಾಹಿತಿಗಳು, ಚಿತ್ರ ಕಲಾವಿದರು ಹೀಗೆ ಎಲ್ಲರೂ ಅದನ್ನೇ ಹೇಳುತ್ತಾರೆ. ಏನೆಂದರೆ ಅಭಿಮಾನಿಗಳ ಪ್ರೀತಿಯೇ ನಮ್ಮ ಆಸ್ತಿ ಎಂದು. ಅದನ್ನು ಎಷ್ಟರ ಮಟ್ಟಿಗೆ ಮನಃಪೂರ್ವಕವಾಗಿ ಹೇಳುತ್ತಾರೋ ತಿಳಿಯದು, ಆದರೆ ಖಂಡಿತ ಆ ಮಾತು ನೂರಕ್ಕೆ ನೂರು ಸತ್ಯ.
ಅಂತಹ ಪ್ರೀತಿಯನ್ನು ಮೊದಲು ತೋರಿಸಿದ್ದು ಈ ಚಿತ್ರ. ಹೌದು, ಫೇಸ್‌ಬುಕ್‌ನ ಧರ್ಮಗ್ರಂಥ ಪುಟದಿಂದ ಆರಂಭವಾದ ಈ ಜಾಹಿತಾತು(?), ನೂರಾರು ಜನ ಕನ್ನಡಿಗರ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ (Re-Share), ಅನೇಕ ಕನ್ನಡಿಗರಿಗೆ ಪರಿಚಯವಾಗಿದೆ. ಇದಕ್ಕೆ ಒಂದು ಉದಾಹಣೆ ಇಲ್ಲಿದೆ, ಇನ್ನೊಂದು ಇಲ್ಲಿದೆ ನೋಡಿ. (ಇಂತಹ ಇನ್ನೂ ಅನೇಕ ಶೇರ್‌ಗಳು Facebook ನಲ್ಲಿವೆ, ನಿಮಗೂ ಸಿಕ್ಕರೆ ನಮ್ಮೊಂದಿಗೂ ಹಂಚಿಕೊಳ್ಳಿ, ಹಾಗೂ ನೀವು ಸಹ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.)
ಇದನ್ನು ಸಿದ್ದಪಡಿಸಿದ ಸ್ನೇಹಿತರಿಗೆ ಕೃತಜ್ಞತೆಯನ್ನು ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ. ಈ ಮೊದಲ ಮೆಟ್ಟಿಲಿನ ಮಾತುಕತೆಗೆ ಇನ್ನೆಷ್ಟು ತಿಂಗಳು ಕಾಯಬೇಕಿತ್ತೋ ತಿಳಿಯದು, ಆದರೆ ನಿಮ್ಮ ಈ ಪ್ರಯತ್ನದಿಂದಾಗಿ, ಪದ ತಂತ್ರಾಂಶ 4.0 ಆವೃತ್ತಿ ರಿಲೀಸ್ ಆದ ಒಂದು ವಾರದಲ್ಲಿಯೇ ಮೊದಲ ಮಎಟ್ಟಿಲಿನ ಸಿಹಿ ಸುದ್ದಿ ಹಂಚಿಕೊಂಡಿದ್ದೇವೆ. ನಿಮಗೆ ಮತ್ತೊಮ್ಮೆ ನಮ್ಮ ಧನ್ಯವಾದಗಳು.
ಇಂತಿಪ್ಪ, ಇಷ್ಟು ಹೇಳಿ ಇ ಮಾತು-ಕತೆಯನ್ನು ಮುಗಿಸಲಾಗುತ್ತಿದೆ. ಪದ ತಂತ್ರಾಂಶ ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಆಶಯ, ಅದಕ್ಕೆ ನಿಮ್ಮ ಪ್ರೀತಿಯ ಶ್ರೀರಕ್ಷೆ ಸದಾ ಇರಲಿ ಎಂದು ಕೇಳುತ್ತಾ …ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ.
ಆ ದೀಪಾವಳಿ ಹಬ್ಬಕ್ಕೆ ಈಗಾಗಲೇ ಸಜ್ಜಾಗಿ ನಿಂತಿದ್ದೀರಿ ಎಂದು ಕಾಣುತ್ತದೆ. ಈಗಲೇ ಒಮ್ಮೆ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..ಪಠಾಕಿ ಸಿಡಿಸುವಾಗ ಸಾದ್ಯವಾದಷ್ಟು ಹುಶಾರಾಗಿರ್ರಿ ಎಂದು ತಿಳಿಸುತ್ತಾ…
ವಂದನೆಗಳೊಂದಿಗೆ…




15 pings
Skip to comment form ↓