Feedback

You can send your feedback to “software.pada[AT]gmail.com” or leave a comment below

Permanent link to this article: https://www.pada.pro/feedback/

129 comments

Skip to comment form

  1. jagadeesh

    ಈ ತಂತ್ರಾಸವು ಬಹಳ ಚನ್ನಾಗಿದೆ.

    1. @pada.pro

      ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡದ್ದಕ್ಕೆ.

      1. ಟಿ.ಹೆಚ್‌.ಜಗದೀಶ್

        ಗೌರವಾನ್ವಿತ ಲೋಹಿತ್‌ ರವರಿಗೆ,
        ತಮಗೆ ತುಂಬಾ ಧನ್ಯವಾದಗಳು

        1. @pada.pro

          ಧನ್ಯವಾದಗಳು ಜಗದೀಶ್ ಅವರೆ,
          ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ

      2. ಟಿ.ಹೆಚ್‌.ಜಗದೀಶ್

        ಗೌರವಾನ್ವಿತ ಲೋಹಿತ್‌ ರವರಿಗೆ,
        ತಮಗೆ ತುಂಬಾ ಧನ್ಯವಾದಗಳು, ನಿಮ್ಮ ಪದ ತಂತ್ರಾಂಶವು ಬಹಳ ಚನ್ನಾಗಿದೆ. ಈ ತಂತ್ರಾಂಶವು ವಿಶೇಷವಾಗಿ ಕನ್ನಡಿಗರಿಗೆ ದೊರೆತ ಬಹು ದೊಡ್ಡ ವರದಾನವಾಗಿದೆ. ತಾವು ಸಾಧ್ಯವಾದರೆ, ಎಂ.ಎಸ್‌.ಆಫೀಸ್‌ನ ವರ್ಡ(2010)ನಲ್ಲಿ ಬೆರಳಚ್ಚುಮಾಡುವಾಗ ” Spell Check”, “Spell Check as you type”, ” Word meaning” , padakosha, ಇತರೆ ಸೌಲಭ್ಯಗಳು ಕನ್ನಡಕ್ಕೂ ದೊರಕುವಂತೆ (plugins)ಮಾಡಿರೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.
        ವಂದನೆಗಳೊಂದಿಗೆ,
        ಜಗದೀಶ್‌

        1. kadalurugowda

          ಮಾನ್ಯರೆ ದಯಮಾಡಿ ವಿಂಡೋಸ್‌ನ ೬೪ ಬಟ್‌ ಆಪರೆಟಿಂಗ್‌ ಸಿಸ್ಟಮ್‌ನಲ್ಲಿಯೂ ಪದ ತಂತ್ರಾಂಶ ಕೆಲಸ ಮಾಡುವಂತೆ ಮಾಡಿರೆಂದು ಮನವಿ ಮಾಡುತ್ತೇವೆ.

          1. @pada.pro

            ಪದ 5.0 ರೆಡಿಯಾಗಿದೆ
            http://www.pada.pro/download/

    2. kadalurugowda

      ಗೌರವಾನ್ವಿತ ಲೋಹಿತ್‌ ರವರಿಗೆ,
      ದಯಮಾಡಿ ವಿಂಡೋಸ್‌ನ ೬೪ ಬಿಟ್‌ಗೆ ಸರಿಹೊಂದುವಂತೆಯೂ ಪದ ತಂತ್ರಾಂಶವನ್ನು ಸಿದ್ದ ಮಾಡಬೇಕೆಂದು ಮನವಿ ಮಾಡುತ್ತೇವೆ. ಏಕೆಂದರೆ ಈಗ ಪ್ರಸ್ತುತ ೬೪ ಬಿಟ್‌ ಕಂಪ್ಯೂಟರ್‌ನಲ್ಲಿ ಪದ ತಂತ್ರಾಂಶ ಕಾರ್ಯನಿರ್ವಯಿಸುತ್ತಿಲ್ಲ. ಆದುದರಿಂದ ದಯವಿಟ್ಟು ಬೇಗ ಮಾಡಬೇಕೆಂದು ಮತ್ತೊಮ್ಮೆ ಬೇಡಿಕೆಯನ್ನು ಇಡುತ್ತಿದ್ದೇನೆ.
      ವಂದನೆಗಳೊಂದಿಗೆ
      ಜಗದೀಶ್‌

      1. @pada.pro

        ಪದ 5.0 ಟ್ರೈ ಮಾಡಿ
        https://www.pada.pro/download/Pada-5.0-Windows-Portable-release_3.zip

  2. jagadeesh

    ಗೌರವಾನ್ವತ ಲೋಹಿತ್‌ ರವರಿಗೆ,
    ಪದ ಪ್ಯಾಡನ್ನು ಎಂ.ಎಸ್‌.ಆಫೀಸ್‌ನ ವರ್ಡನಂತೆ ಮಾಡಿದರೆ, ಕನ್ನಡ ಡಿ.ಟಿ.ಪಿ.ಬೆರಳಚ್ಚುಗಾರರ ಸರ್ವ ತೊಂದರೆಗಳು ನಿವಾರಣೆಯಾಗುತ್ತದೆಂಬ ಅಭಿಪ್ರಾಯ ನನ್ನದಾಗಿದೆ. ಈ ಕೆಲಸ ಸಾಧ್ಯವಾದರೆ ಮಾಡಿರೆಂದು ನನ್ನ ಬೇಡಿಕೆ.
    ವಂದನೆಗಳೊಂದಿಗೆ,
    ಜಗದೀಶ್‌

    1. @pada.pro

      ಗೌರವಾನ್ವಿತ ಜಗದೀಶ್‌ರವರಿಗೆ
      ನೀವು ಪದ ತಂತ್ರಾಂಶವನ್ನು ಬಳಸುತ್ತಿರುದಕ್ಕೆ ಧನ್ಯವಾದಗಳು.
      ನೀವು ಮೇಲೆ ತಿಳಿಸಿಸುತ್ತಿರುವ ಸಮಸ್ಯೆಯ ಅರಿವು ನಮಗಿಲ್ಲದೇ ಇರುವುದರಿಂದ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ,
      ನಿಮ್ಮ ಕೋರಿಕೆಯನ್ನು pada.pro/contact-us ಪುಟದಿಂದ, ಒಂದು ವಿವರವಾದ ಓಲೆಯನ್ನು ಕಳಿಸಿಕೊಡಿ.
      ವಂದನೆಗಳು

      1. ಟಿ.ಹೆಚ್‌.ಜಗದೀಶ್‌

        ಗೌರವಾನ್ವತ ಲೋಹಿತ್‌ ರವರಿಗೆ,
        ತಮ್ಮ ಅಪಾರವಾದ ಶ್ರಮದ ಫಲವಾಗಿ ನಮಗೆ ಪದ ತಂತ್ರಾಂಶವು ದೊರಕಿದೆ. ಅದಕ್ಕಾಗಿ ತಮಗೆ ಧನ್ಯವಾದಗಳು. ಪದ ತಂತ್ರಾಂಶದ ಮುಂದುವರಿದ ವರ್ಷನ್‌ಗಳು ಬೇಗ ಬರಲಿ, ನಂತರ ನಮ್ಮ ಕೋರಿಕೆ ತಾವು ಸಾಧ್ಯವಾದರೆ ಕನ್ನಡದ ಒಂದು ಆಪರೇಟಿಂಗ್‌ ಸಿಸ್ಟಮ್‌ಅನ್ನು ತಯಾರು ಮಾಡಿದರೆ, ನಮ್ಮ ಆನಂದಕ್ಕೆ ಕೊನೆಯೇ ಇಲ್ಲವಾಗುತ್ತದೆ.
        ವಂದನೆಗಳೊಂದಿಗೆ,
        ತಮ್ಮ ಜಗದೀಶ್‌

  3. ಜೀವನ್ ಕುಮಾರ್ ಜೆ. ಎನ್.

    IMEನೊಂದಿಗೆ ಎಮ್. ಎಸ್. ವರ್ಡನಲ್ಲಿ ಬೆರಳಚ್ಚು ಮಾಡುವಾಗ ತುಂಗ ಒಂದನ್ನು ಬಿಟ್ಟು ಇತರ ಅಕ್ಷರ ವಿನ್ಯಾಸಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇದೊಂದನ್ನು ಬಿಟ್ಟರೆ ನುಡಿಗಿಂತಲೂ ಇದೇ ಉತ್ತಮ ತಂತ್ರಾಂಶವೆಂದು ನನಗನಿಸುತ್ತದೆ. ಸಾಧ್ಯವಾದರೆ ಇನ್ನೂ ಹೆಚ್ಚು ವಿನ್ಯಾಸಗಳನ್ನು ಸೇರಿಸಿದರೆ ನಿಮಗೆ ಚಿರರುಣಿಯಾಗಿರುತ್ತೇನೆ

    1. @pada.pro

      ನಮಸ್ತೆ ಜೀವನ್
      ಪದ ತಂತ್ರಾಂಶವನ್ನು ಮೆಚ್ಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು.
      ನೀವು ಹೇಳುತ್ತಿರುವ ಸಮಸ್ಯೆಯನ್ನು ಗಮನಿಸಲಾಗುತ್ತದೆ. ಅಂದ ಹಾಗೆ ಇನ್ನೂ “ಹೆಚ್ಚಿನ ವಿನ್ಯಾಸಗಳು” ಎಂದರೆ
      ಯಾವುವು? ಎಂದು ತಿಳಿಯಲಿಲ್ಲ.

  4. ರಾಜಾಶ೦ಕರ್

    ಪದ ತ೦ತ್ರಾ೦ಶ ತು೦ಬಾ ಚೆನ್ನಾಗಿದೆ. ಕನ್ನಡದಲ್ಲಿ ಬರೆಯಲು ತು೦ಬಾ ಖುಷಿಯಾಗುತ್ತಿದೆ.ಧನ್ಯವಾದಗಳೊಂದಿಗೆ

    1. @pada.pro

      ನಮಸ್ತೆ ರಾಜಾಶಂಕರ್,

      ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ಪದ ತಂತ್ರಾಂಶದ ಮೂಲಕ ವಂದನೆಗಳನ್ನು ತಿಳಿಸಲಿಚ್ಚಿಸುತ್ತೇವೆ. 🙂

  5. Santhosh Mugoor

    ನಮಸ್ತೆ ,

    ಚೆನ್ನಾಗಿದೆ. ನಿಮ್ಮ ಪ್ರಯತ್ನ ಅಭಿನಂದನೆಗೆ ಅರ್ಹ.

    ಆದ್ರೆ ಪದIME ಅನ್ನು ಬಳಸುವಾಗ “ಮೂ”(mU) ಅನ್ನು ಟೈಪಿಸಿದರೆ ಅದು “ಮಾ” ನ ರೀತಿಯಲ್ಲೆ ಕಾಣಿಸುತ್ತದೆ. ಆದ್ರೆ ಪದ ಎಡಿಟರ್ ನಲ್ಲಿ ಬಹಳಷ್ಟು ವಿನ್ಯಾಸಗಳನಲ್ಲಿ ತೊಂದರೆ ಕಾಣುತ್ತಿಲ್ಲ. ತುಂಗ ವಿನ್ಯಾಸದಲ್ಲಿ ಆ ತೊಂದರೆ ಇದೆ ಅನ್ನಿಸತ್ತೆ. ಮತ್ತೊಮ್ಮೆ ಗಮನಿಸಿ.

    1. Prasanna SP

      “ಮೂ” ಮತ್ತು “ಮಾ” ಒಂದೇ ರೀತಿ ಕಾಣುವುದು ಹಳೆಯ ತುಂಗಾ ಫಾಂಟಿನಲ್ಲಿರುವ ತೊಂದರೆ. ತುಂಗಾ ಫಾಂಟಿನ ಹೊಸ ಆವೃತ್ತಿಯಲ್ಲಿ ಈ ತೊಂದರೆ ಇಲ್ಲ.

    2. @pada.pro

      ನಮಸ್ತೆ ಸಂತೋಷ್,
      ನಿಮ್ಮ ಆಭಿಪ್ರಾಯವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
      ನೀವು ಕೇಳುತ್ತಿರುವ ಬಗ್ಗೆ ಪ್ರಸನ್ನ ಅವರು ಒಂದು ಮಾಹಿತಯನ್ನು ತಿಳಿಸಿದ್ದಾರಲ್ಲ. ಅದರಿಂದ ನಿಮಗೆ ಸಹಾಯವಾಯಿತೆಂದು ಭಾವಿಸ ಬಹುದೇ?
      ಮತ್ತೊಮ್ಮೆ ಧನ್ಯವಾದಗಳು.

  6. ಪ್ರಶಾಂತ ಸೊರಟೂರ

    ಲೋಹಿತ್ ಅವರೇ,
    ’ಪದ’ ಬೊಂಬಾಟಾಗಿದೆ 🙂
    ೧) Download ನಲ್ಲಿ ಮೊದಲು ಕಾಣುವ ಕೊಂಡಿಯಿಂದ ಇಳಿಸಿಕೊಂಡರೆ. ಕಡತಗಳು ಕೆಟ್ಟಿವೆ (Corrupt) ಅಂತಾ ಬರ‍್ತಿದೆ. ಅದೇ ಅದರ ಕೆಳಗೆ ಕೊಟ್ಟಿರುವ if you face difficulties .. ನಿಂದ ಇಳಿಸಿಕೊಂಡ್ರೆ ಸರಿಯಾಗಿ ಬಂತು.
    ೨) ಬೇರೆ ಕಡೆ ನೇರವಾಗಿ ಬರೆಯುವ IME feature ಯಾಕೋ ನಾ ಇಳಿಸಿಕೊಂಡ ’ಪದ’ ದಲ್ಲಿ ಕಾಣುತ್ತಿಲ್ಲ, ಇದಕ್ಕೆ ಹೆಚ್ಚಿನದೆನಾದ್ರೂ ಮಾಡಬೇಕಾ ?
    ೩) ಕನ್ನಡ ವಿಕ್ಷನರಿಗೆ ’ಪದ’ಕೊಂಡಿ ಬೆಸೆದದ್ದು ತುಂಬಾ ಒಳ್ಳೆಯ ಕೆಲ್ಸಾ

    ಚೆಲುವಿನ ’ಪದ’ ಹೊಮ್ಮಿಸಿದ್ದಕ್ಕೆ ನಿಮಗೆ ಧನ್ಯವಾದಗಳು 🙂

    1. @pada.pro

      ನಮಸ್ತೆ ಪ್ರಶಾಂತ್‌ರವರೇ,
      ನಿಮ್ಮ ಅನಿಸಿಕೆಯನ್ನು ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು.
      1) ಹೌದು, ಒಮ್ಮೊಮ್ಮೆ ಈ ರೀತಿ ಆಗುವುದುಂಟು. ಇದರ ಬಗ್ಗೆ ಈಗಾಗಲೇ ನಮಗೆ ಅರಿವಾಗಿದೆ.ಪರಿಹಾರವನ್ನು ಕಂಡುಕೊಳ್ಳುವವರಗೆ ಸಹಕರಿಸಬೇಕಾಗ ಪ್ರಾರ್ಥನೆ.
      2) ಇಲ್ಲ. ಹೆಚ್ಚನದೇನೂ ಇಲ್ಲ. ನೀವು Windows -> Start -> Programs -> PadaSoftware ಈ ದಾರಿಯಲ್ಲಿ ಸಾಗಿ. ಅಲ್ಲಿ PadaIME ಎಂದು ಒಂದು ಐಕಾನ್ ಕಾಣಿಸಬೇಕು.
      ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಗಣಕದ ಬಲ-ಕೆಳ ಮೂಲೆಲ್ಲಿ ಒಂದು ಐಕಾನ್‌ ಬರುತ್ತದೆ. ಅಲ್ಲಿಂದ ಆರಂಬಿಸಿ.
      ಅಥವಾ ನೀವು zip ವ‍ರ್ಷನ್‌ ಡೌನ್‌ಲೋಡ್‌ ಮಾಡಿಕೊಂಡಿದ್ದೀರ?
      3) 🙂 ಹೌದು. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
      ಪದದ ಚೆಲುವನ್ನು ಒಪ್ಪಿಕೊಂಡದ್ದಕ್ಕೆ ಕೃತಜ್ಞತೆಗಳು 🙂

  7. ತವಿಶ್ರೀ, ಚೆನ್ನೈ

    ಲೋದ್ಯಾಶಿಯವರಿಗೆ ನಮಸ್ತೆ

    ಸುಲಲಿತ ಸುಂದರ ಪದ ನೀಡಿದುದ್ದಕ್ಕೆ

    ವಂದನೆಗಳು

    ಗುರುದೇವ ದಯಾ ಕರೊ ದೀನ ಜನೆ

    1. @pada.pro

      ನಮಸ್ತೆ ತವಿಶ್ರೀರವರಿಗೆ, ಹೇಗಿದ್ದೀರಿ? ಇದೇನಿದು ಚೆನ್ನೈನಿಂದ ಅಂತ ಬರ್ತಿದೆ?
      ಇರಲಿ, ಎಲ್ಲಾದರೂ ಇರಿ. ಸಂಸಾರದೊಂದಿಗೆ ಸುಖವಾಗಿರಿ 🙂
      ಒಳ್ಳೇಯ ಅಭಿಪ್ರಾಯವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ.

  8. S Raghavendra Bhatta

    aatmeeyare,

    shubhavaagali nimma nuDisEvege, kannadadamakkaLa kaLakaLiya saahasake.

    1. @pada.pro

      ನಮಸ್ತೆ ರಾಘವೇಂಧ್ರರವರೇ, ನಿಮ್ಮ ಪ್ರೋತ್ಸಾಹ ಪದ ತಂತ್ರಾಂಶಕ್ಕೆ ಸದಾ ಇದೇ ರೀತಿ ಇರಲಿ ಎಂದು ಕೇಳಿಕೊಳ್ಳಲು ಇಚ್ಚಿಸುತ್ತೇವೆ.

  9. ಪೂರ್ಣಚಂದ್ರ

    Resource Limit Is Reached

    The website is temporarily unable to service your request as it exceeded resource limit. Please try again later.

    ಹೀಗೆ ಹೇಳ್ತಾ ಇದೆ ಸಾರ್ ಪದ ತಂತ್ರಾಂಶ ಡೌನ್ಲೋಡ್ ಮಾಡಲು ಆಗುತ್ತಿಲ್ಲ !!!!!

  10. ಪೂರ್ಣಚಂದ್ರ

    Resource Limit Is Reached

    The website is temporarily unable to service your request as it exceeded resource limit. Please try again later.

    ಹೀಗೆ ಹೇಳ್ತಾ ಇದೆ ಸಾರ್, ಪದ ತಂತ್ರಾಂಶ ಡೌನ್ಲೋಡ್ ಮಾಡಲು ಆಗುತ್ತಿಲ್ಲ !!!!!

    1. @pada.pro

      ನಮಸ್ತೆ ಪೂರ್ಣಚಂದ್ರರವರೇ, ಕ್ಷಮಿಸಿ, pada.pro ಗೆ ಟ್ರಾಫಿಕ್ ಹೆಚ್ಚಾದುದರಿಂದ ಈ ರೀತಿ ಸಮಸ್ಯೆಯಾಗಿದೆ ಅಷ್ಟೇ. ಇದನ್ನು ಸರಿಪಡಿಸಲು ಪ್ರಯತ್ನಗಳು ಸಾಗಿವೆ. ನೀವು ಸ್ವಲ್ಪ ಬಿಡುವಾದಾಗ ಪ್ರಯತ್ನಿಸುತ್ತಿರಿ. ನೋಡಿ ನಿಮಗೆ ಪ್ರತಿಕ್ರಿಯೆಯನ್ನು ನೀಡಲು ಸಹ ತಡವಾಗಿದೆ. 🙁 ನಮಗೂ ಅದೇ ಸಮಸ್ಯೆ ಎದುರಾಗುತ್ತಿದೆ. ಈ ಅಡಚಣೆಗೆ ಕ್ಷಮೆಇರಲಿ.

    2. manjunath a r

      mirror link ನ್ನು seperate ಆಗಿ new tab ನಲ್ಲಿ open ಮಾಡಿ. ಡೌನ್ಲೋಡ್ ಆಗುತ್ತೆ.

  11. A.T>patil

    ಮಾನ್ಯರೇ,
    ತಮ್ಮ ಪ್ರಯತ್ನಕೆ್ಕ ಅಭಿನಂದನೆಗಳು.
    ನಾನು ದಿಕೂ್ಸಚಿ ಕನ್ನಡ ಮಾಸ ಪತಿ್ರಕೆಯ ಸಂಪಾದಕ. ಈ ಕುರಿತ ಲೇಖನ ನನ್ನ ಪತಿ್ರಕೆಯಲಿ್ಲ ಪ್ರಕಟಿಸಬಹುದು.
    ಅದರ ಅಭಿವೃದಿ್ಧಗಾಗಿ ನೀವೇ ಕನ್ನಡಿಗರಲಿ್ಲ ಅರಿಕೆ ಮಾಡಿಕೊಳ್ಳಬಹುದು.
    ಮಾಹಿತಿ ಸಂಪೂಣರ್ವಾಗಿ ಕಳುಹಿಸಿ.
    ಈ ಫಾ್ಯಂಟ್ ಗಳನು್ನ ಆ್ಯಪಲ್ ಮಾ್ಯಕ್ ನಲಿ್ಲ ಬಳಸಬಹುದೇ. ತಿಳಿಸಿ. ನಾನೋವರ್ ಮಾ್ಯಕ್ ಕಂಪೂ್ಯಟರ ಬಳಕೆದಾರ
    ವಿಶಾ್ವಸವಿರಲಿ. ಪ್ರಯತ್ನ ಅನುಚಾನವಾಗಿ ಮುಂದುವರಿಯಲಿ ಎಂದು ಆಶಿಸುವ,
    ನಿಮ್ಮ ದಿಕೂ್ಸಚಿ (ಎ.ಟಿ) ಪಾಟೀಲ್

    1. @pada.pro

      ನಮಸ್ತೆ ಪಾಟೀಲ್‌ರವರೆ
      ನಿಮಗೆ ಮಾಹಿತಿಯನ್ನು ಕಳಿಸಿಕೊಟ್ಟಿದ್ದೇವೆ, ಇನ್ನೇನಿದ್ದರೂ ಪ್ರಕಟಿಸುವುದು ನಿಮ್ಮ ಕೆಲಸ 🙂
      ಧನ್ಯವಾದಗಳು

  12. manjunath a r

    ಬಹಳ ಅದ್ಭುತವಾದ ತಂತ್ರಾಂಶ. ಧನ್ಯವಾದಗಳು.
    ಇದನ್ನು ms office ನ exel ನಲ್ಲಿ ಹೇಗೆ ಮಾಡೋದು?

    1. @pada.pro

      ನಮಸ್ತೆ,
      ಪದ ತಂತ್ರಾಂಶವನ್ನು install ಮಾಡಿಕೊಂಡ ಬಳಿಕ ನಿಮ್ಮ ಗಣಕದ
      Start (ಎಡ-ಕೆಳ ಮೂಲೆಯಲ್ಲಿದೆ) -> programs -> Pada Software -> PadaIME
      ಇದನ್ನು ಒತ್ತಿ. ಈಗ ನಿಮ್ಮ ಗಣಕದ ಬಲ-ಕೆಳ ಮೂಲೆಯಲ್ಲಿ ಒಂದು ಐಕಾನ್‌ ಕಾಣಿಸುತ್ತಿದೆ, ಗಮನಿಸಿ. ಅಲ್ಲಿಂದ ಆರಂಬಿಸಿ.

  13. ಸಂದಿಪ ನಾಯ್ಕ

    ಕನ್ನಡದವರಿಗೆ ಇ ತಂತ್ರಾಂಶ ನಿಡಿದಕ್ಕೆ ತುಂಬು ಹೃದಯದ ದನ್ಯವಾದಗಳು

    1. @pada.pro

      ಪ್ರತಿಕ್ರಿಯಿಸಿದ್ದಕ್ಕೆ ನಿಮಗೂ ಧನ್ಯವಾದಗಳು ಸಂದೀಪ್

  14. ishwar yavagal

    ನಮಸ್ಕಾರಗಳು, ನೀವು ತಯಾರಿಸಿದ ತತ್ರಾಂಶ ಯಶಸ್ವಿಯಾಗಲಿ,
    ಪದ ಸಾಪ್ಟ್ ವೇರ್ ನ್ನು ನೇರವಾಗಿ ಕೋರಲ್ ಡ್ರಾ ಅಪ್ಲಿಕೇಷನ್ ನಲ್ಲಿ ಕೆಲಸಮಾಡುವಂತೆ
    ಸಿದ್ದಪಡಿಸಿ ಹಾಗೂ ಕೆಲವು ಪದಗಳು ಸರಿಯಾಗಿ (ಟ್ಐ ಟ್ಯೈಪ್) ಮಾಡಲು ಬರುವದಿಲ್ಲ ಇದನ್ನು ಸರಿಪಡಿಸಿ ಹಾಗೂ ಇನ್ನು ಹಲವು ಫಾಂಟ್ ಗಳನ್ನು
    ಸೇರಿಸಿ .

    1. @pada.pro

      ನಮಸ್ತೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು ಈಶ್ವರ್
      ನಿಮಗೆ ಯಾವ, ಯಾವ ಪದಗಳನ್ನುಬರೆಯಲು ಸಾಧ್ಯವಾಗಲಿಲ್ಲ?
      ನೀವು ಯಾವ ಕೀಲುಮಣೆ ಬಳಸುತ್ತೀರಿ?

  15. srinivas

    Neevu ond sarthi Ganaka parishat ge bheeti kodi ! Your software is more cleaner and simpler. Nudi jothe integrate madbaudhu 🙂

    1. @pada.pro

      🙂 ಧನ್ಯವಾದಗಳು ಕಣ್ರೀ ಶ್ರೀನಿವಾಸ್

  16. shrinivas pandurarangi

    tavu tilisidante ime otti, icon bala bhagadlli bandru word mttu execl dlli type madlu aguttilla

  17. chandru

    ನಮಸ್ಕಾರ,
    ನನ್ನ ಗಣಕಯಂತ್ರದಲ್ಲಿ ಜಿಪ್ ಸಾಫ್ಟವೇರನ್ನು ಸೇವ್ ಮಾಡಿದ ನಂತರ ಎಕ್ಸ್ಟ್ರಾಕ್ಟ್ ಮಾಡಲು ಹೊದಲ್ಲಿ ಇನ್ ವ್ಯಾಲಿಡ್ ಎಂದು ಎರರ್ ಮೆಸೆಜ್ ಬರುತ್ತಿದೆ. ದಯವಿಟ್ಟು ಪರಿಹಾರ ಸೂಚಿಸಿ.

    1. @pada.pro

      ನಮಸ್ತೆ,

      ಈ ಸಮಸ್ಯೆಯನ್ನು ಪರಿಹರಿಸಲಾಗಿದೆ, ಇನ್ನು ಈ ಸಮಸ್ಯೆ ಬರಲಾರದು. ತಮ್ಮ ಸಹಕಾರಕ್ಕೆ ಧನ್ಯವಾದಗಳು.
      ಈಗ ಹೊಸದಾಗಿ ಡೌನ್‌ಲೋಡ್‌ ಮಾಡಿ, ಪದ ಬಳಸಲು ನೋಡಿ.

  18. ಮನು

    ಕನ್ನಡದಲ್ಲಿ ಬರೆಯುತ್ತಿರುವುದಕ್ಕೆ ಖುಶಿಯಾಗುತ್ತಿದೆ. “ಪದ”ದ UNIX ಆವ್ರುತ್ತಿಗಾಗಿ ಕಾಯುತ್ತಿರುವೆ. ನಿಮಗೆ ನಾನೆನಾದರು ತ೦ತ್ರಾ೦ಶ ಸಹಾಯ ಮಾಡಬೇಕೆ೦ದರು ಹೇಗೆ ಮಾಡಬಹುದು?
    ವ೦ದನೆಗಳು

    1. @pada.pro

      ನಮಸ್ತೆ ಮನುರವರೇ
      ನಿಮ್ಮ ಗಣಕದಲ್ಲಿ ನೀವು ಕನ್ನಡವನ್ನು ಬಳಸುತ್ತಿರುವುದು ನಮಗೂ ಸಂತೋಷ.
      ಪದ ಲೀನಕ್ಸ್ ಆವೃತ್ತಿ ಕೆಲವೇ ದಿನಗಳಲ್ಲಿ ಬರಲಿದೆ.
      ನೀವು ತಂತ್ರಾಂಶ ಸಹಾಯಕ್ಕೆ ಮುಂದೆ ಬಂದದ್ದು ತುಂಬಾ ಸಂತೋಷದ ವಿಷಯ.
      ಟಚ್‌ಲ್ಲಿ ಇರಿ. ಮುಂದೆ ನೋಡೋಣ. ಆಯ್ತಾ?
      ಧನ್ಯವಾದಗಳು.

      1. MANU

        ಧನ್ಯವಾದಗಳು!!
        ಈ ಮೈಲ್ ಇಡಿ ಗೆ ಮೈಲ್ ಮಾಡಿ, ನನ್ನ ಕೈಲಾದ ಸಹಾಯ ಮಾಡುವೆ
        tmmanu@gmail.com

  19. adarsh

    sir, nivu namma davanagere avru antha keli tumba santhosha aitu ,pada balasi nodide, tumba clean and fast ide, nudi 4.0 and barahakinta eshto uttama, adre nimma padakoshavannu ms office word 2010 ge serisalu agidre tumba chenagittu mattu innastu unicode font kotre chennagitu, mathe android mattu ios atva itare mobile divice nali bandre chenagittu. otnally kannadakondu adbhuta koduge

    1. @pada.pro

      ನಮಸ್ತೆ ,
      ನೀವು ದಾವಣಗೆರೆಯವ್ರು ಪ್ರತಿಕ್ರಿಯಿಸಿದ್ದಕ್ಕೆ ನಮಗೂ ಸಂತೋಷವಾಗಿದೆ. ಧನ್ಯವಾದಗಳು.
      ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇವೆ.

  20. ಚಂದು@chandumaraj

    ನಮಸ್ಕಾರ ಲೋಹಿತ ಡಿ ಶಿವಮೂರ್ತಿ ರವರೆ,
    ನಿಮ್ಮ ”ಪದ”ವನ್ನು ಬಳಸುತ್ತಿದ್ದೆನೆ , ಇನ್ನಷ್ಟು fonts ಇದ್ದಿದ್ದರೆ ಚನ್ನಾಗಿರೋದು,, ಏನೇ ಆಗಲಿ ‘ಲೋಹ’ದಂತಿರುವ ಭಾಷೆಯನ್ನು “ಪದ”ದ ಮೂಲಕ ‘ಹಿತ’ವಾಗಿ ಬೆಸುಗೆ ಹಾಕಿದ್ದೀರ ಧನ್ಯವಾದ, ,, ನಿಮ್ಮ ಸಾಧನೆಗೆ ಶುಭ ಹಾರೈಕೆಯು.

    1. @pada.pro

      ಧನ್ಯವಾದಗಳು ಚಂದ್ರುಮಹರಾಜ್ 🙂
      ಸಾಹಿತಿಗಳಂತೆ ಪ್ರತಿಕ್ರಿಯಿಸಿದ್ದೀರಿ. ಇಷ್ಟವಾಯ್ತು.

  21. sandeep

    idu download agtilla
    dayavittu download aguva haage madi

    1. @pada.pro

      swalpa samayada nantara prayatnisi. eega taane pareekshisiddeve. sariyaagi download aagutte.
      dhanyavada

    2. ಚಂದು@chandumaraj

      ಈ ರೀತಿ ಸಮಸ್ಯೆ ಇದ್ರೆ speed bit download software ಹಾಕ್ಕೊಂಡು ಮಾಡಿ ಆಗ್ತದೆ,,

  22. srinivas

    maanyre,

    pada software bagge nanage tumba hemme yenisutte. aadre idralli kelvu nyunate ive.
    ademdare ‘yo’ mattu ‘mo’ emba akshragalannu typisidre tappu baruttide. idannu sari maaduvudu hege?

    1. @pada.pro

      ಯಾವ ಕೀಲಿಮಣೆ ಉಪಯೋಗಿಸಿದಿರಿ?
      ಏನು ತಪ್ಪು ಬರುತ್ತದೆ?

      ಎಂದು ತಿಳಿಸಿ, ಹಾಃ, ನೀವು ಪದ Help ಮೆನುನಲ್ಲಿ ಒಮ್ಮೆ ಗಮನಿಸಿ ನೋಡಿ, ನಿಮ್ಮ ಸಮಸ್ಯೆಗೆ ಉಪಾಯವಿರಬಹುದು.

  23. shiva anand.bagalkot

    Sir,

    kindly tell me or guide me how to use pada software, which I already have installed in my computer
    i am unable to type ottaksharaas in kannada and may more. guide me how to use the total pada software
    padakosha and pada INE. kindly help me in this regard. I was sending kannada mails to vijayjarnataka
    new papers using kannada typing throught gmail. but now a days the facility of kannada typing is not there
    in g mail. kindly meila me to my email id.

    Thanks & Regards
    Shivanand.bagalkot

    1. ವಿಕಾಸ್

      Basavaraj, See ‘Help’ in Pada software.

  24. Satya

    ಪದ ತಂತ್ರಾಂಶವು ಬರಹದ ಹಾದಿಯಲ್ಲಿ ಸಾಗಿ ಬಹು ಮುಂದೆ ಬಂದಿದೆ. ನನ್ನ ಅನುಮಾನವೇನೆಂದರೆ, ಮುಂದೆ ಎಂದಾದರೂ ಬರಹದಂತೆ, ಇದನ್ನೂ ಕೂಡಾ ಮಾರಾಟಕ್ಕೆ ಇಡುವ ಕಾಲ ಬರಬಹುದೇ?

    ಪದವನ್ನು “ಉಚಿತ ತಂತ್ರಾಂಶ”ವಾಗಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿ. (ಬೇಕಾದರೆ, ಅದರ ವಿತರಣಾ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳಿ.) “ಪದ”ವನ್ನು ಪ್ರೀತಿಸುವ, ಕನ್ನಡವನು ಪ್ರೀತಿಸುವ ನಮ್ಮಂಥವರಿಗೆ ನಿರಾಶೆ ಆಗುವುದಿಲ್ಲ ಎಂಬ ಆಶಯ.

    ಇದನ್ನು “ಉಚಿತ ತಂತ್ರಾಶ”ವಾಗಿಯೇ ಉಳಿಸಿಕೊಳ್ಳಲು ನಮ್ಮ ಸಹಾಯವೇನಾದರೂ ಬೇಕಾದಲ್ಲಿ, ಹಿಂಜರಿಯಬೇಡಿ.. 🙂

    1. @pada.pro

      ತುಂಬಾ ಧನ್ಯವಾದಗಳು ಸತ್ಯ ಅವರೇ, ನಿಮ್ಮ ಪ್ರೋತ್ಸಾಹ ಸದಾ ಇರಲಿ.

  25. Harish Kumar

    ಪದ ತಂತ್ರಾಂಶ ಉತ್ತಮವಾಗಿದೆ. ಆದರೆ padaIME ಯನ್ನು ಉಪಯೋಗಿಸಿ ms office 13ರಲ್ಲಿ ಕೆಲ ಪದಗಳನ್ನು ( ಸಹಾಯದ ಪ್ರಕಾರ) ಟೈಪಿಸಲು ಆಗುತ್ತಿಲ್ಲ, ಉದಾ. ಷ,ಜ್ಞಾ. ನಾನು ಬಳಸುವ ಕಂಪ್ಯೂಟರಿನ os windows 8. ದಯವಿಟ್ಟು ‘ಬರಹ’ ತಂತ್ರಾಂಶದಷ್ಟೇ ಸುಲಭವಾಗಿ ‘ಪದ’ ವನ್ನು ಬಳಸುವಂತೆ ಅಭಿವೃದ್ಧಿಪಡಿಸಿ.
    ಧನ್ಯವಾದಗಳು

    1. @pada.pro

      ಧನ್ಯವಾದಗಳು,
      ಷ, ಜ್ಞಾ ಈಗ ಟೈಪಿಸಿರುವುದೂ ಪದ IME ಮೂಲಕವೇ!
      ನೀವು ಹೇಗೆ ಪ್ರಯತ್ನಿಸಿದಿರಿ ಎಂದು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು

      1. Harish Kumar

        ಹೌದು, ಆದರೆ ms office 13 ರಲ್ಲಿ ಮಾತ್ರ ಈ ತೊಂದರೆ ಇದೆ. Sha ಎಂದು ಟೈಪಿಸಿದರೆ ‘ಶಷ’, vijjzaana —-ವಿಜ್ಜಞಾನ ಎಂದು ಬರುತ್ತದೆ. ಉಳಿದ ಕಡೆಗಳಲ್ಲಿ (applications) ಉದಾ. ಇಲ್ಲಿ ವಿಜ್ಞಾನ, ಷ ಸರಿಯಾಗಿದೆ. ಎರಡೂ ಕಡೆ ಉಪಯೋಗಿಸಿದ ಆಂಗ್ಲ ಅಕ್ಷರಗಳು ಅವೇ. akShara——ಅಕ್ಶಷರ ಈಗ ಗೊತ್ತಾದ ಪದ. ಈ ಹಿಂದಿನ ವಾಕ್ಯದಲ್ಲಿ ಸರಿಯಾಗಿ ಬಂದಿದೆ. I am using phonetic keyboard and tunga font. ‘ಪದ’ ದಲ್ಲಿ ಟೈಪಿಸುವಾಗ ತಪ್ಪಾದಲ್ಲಿ ಆ ಅಕ್ಷರವನ್ನು ಸಂಪೂರ್ಣವಾಗಿ ಅಳಿಸಿ ಬರೆಯಬೇಕು, ಆದರೆ ‘ಬರಹ’ ದಲ್ಲಿ ಹೀಗೆ ಇಲ್ಲ.
        ಆಮೆಲೆ—–ತಪ್ಪಾಗಿದೆ, ಸರಿಮಾಡಬೇಕೆಂದರೆ ‘m’ ನ್ನು ಕೂಡಾ ಅಳಿಸಬೇಕು. ತಮಗೆ ಗೊತ್ತಾಗಿದೆ ಎಂದುಕೊಂಡಿದ್ದೇನೆ.
        ಧನ್ಯವಾದಗಳು

  26. ಶಿವಕುಮಾರ್ ನಾಯಕ್

    ಆಂಡ್ರಾಯ್ಡ್ ಪೋನ್‌ಗೆ ಪದ ತಂತ್ರಾಂಶ ಇದ್ದರೆ. ದಯವಿಟ್ಟು ಅದರ ಕೊಂಡಿ ಕೋಡಿ.

    1. ವಿಕಾಸ್

      ಸದ್ಯಕ್ಕೆ ಇದು ಕಂಪ್ಯೂಟರ್ ಗೆ ಮಾತ್ರ ಲಭ್ಯವಿದೆ. ಆಂಡ್ರಾಯ್ಡಿಗೆ ಇಲ್ಲ. ಕನ್ನಡ ಬರೆಯಲು ಆಂಡ್ರಾಯ್ಡಿಗಾಗೆ ಬೇರೆ ಬೇರೆ ಕಿರುತಂತ್ರಾಂಶಗಳಿವೆ.

  27. Raghu

    Thank you very much am searching for this last five years and thank you very much once again

    1. @pada.pro

      Thank you for the feedback 😀

  28. SHIVARAM S.R.

    Just now one of my friend introduced me to ‘pada’. He has not installed it, but only gave life to it through Pen-drive. I will try to install when I am free. As an old time printer, I find this to be comfortable. I wish it gives a boost if you can add kannada DIACRETICALS (swatirhas) as early as possible. Reason is, many a times Sanskrit words, Shlokas would require these. This is for your future guidance and improvement please. Thank you for such a compact software. I wish you best of luck.
    SHIVARAM S. R.
    2nd August 2013

  29. SHIVARAM S.R.

    Just now one of my friend introduced me to ‘pada’. He has not installed it, but only gave life to it through Pen-drive. I will try to install when I am free. As an old time printer, I find this to be comfortable. I wish it gives a boost if you can add kannada DIACRETICALS (swatirhas) as early as possible. Reason is, many a times Sanskrit words, Shlokas would require these. This is for your future guidance and improvement please. Thank you for such a compact software. I wish you best of luck.
    SHIVARAM S. R.
    2nd August 2013
    This is my first letter and it is not aduplicate please. Thank you

  30. SREEKANTIAH KANNAMBADI

    I am a new person for using computers.One of my relative has given me a laptop.i am a kannadiga. I want to learn not only how to use laptop but also Kannada typing.Can you sugest a book(teach your self) in kannada .i am 80 plus and cnnot move out of home. nowadays I have learnt how to type in this machine. One of my friend has helped download your software PADA and i am using it. What I find is for a single meaning word we have to search at two places. For example BANASIGA means adigeyavanu and PACHAKA means adigeyavanu.

  31. SREEKANTIAH KANNAMBADI

    I am a new person for using computers.One of my relative has given me a laptop.i am a kannadiga. I want to learn not only how to use laptop but also Kannada typing.Can you sugest a book(teach your self) in kannada .i am 80 plus and cnnot move out of home. nowadays I have learnt how to type in this machine. One of my friend has helped download your software PADA and i am using it. What I find is for a single meaning word we have to search at two places. For example BANASIGA means adigeyavanu and PACHAKA means adigeyavanu.

    1. @pada.pro

      ದನ್ಯವಾದಗಳು ಸರ್.
      ಪದದಲ್ಲಿ ವಿಕ್ಷನರಿ ಅರ್ಥ ಹುಡುಕುವುದು ಈಗ ತುಂಬಾ ಸುಲಭ

  32. Ramagopal Ks

    pada software is very useful. I want to know whether it can be used in adobe page maker 7 for a word document
    thanks

  33. Ramagopal Ks

    very useful softwear. can I use it on adobe page maker please.

  34. Ramanjeneya setty

    dhanyavadagalu Lohit avarige…………….

  35. dr.srinivasachari.B

    inta saftwere tumba avasyaka nangu kannada type madadu kasta adru ishta

  36. ರಾಜಪ್ಪ

    ಕನ್ನಡ ತಂತ್ರಾಂಶವನ್ನು ಕೊಟ್ಟಿದಕ್ಕೆ ಬಹಳ ಧನ್ಯವಾದಗಳು. ಇದಕ್ಕೊ ಮೊದಲು ನಾನು ಬರಹ ತಂತ್ರಾಂಶವನ್ನು ಉಪಯೋಗಿಸುತ್ತಿದ್ದೆ ಆದರೆ ಅದು ಉಚಿತವಾದ ತಂತ್ರಾಂಶವಾಗಿರಲಿಲ್ಲ. ನುಡಿ ತಂತ್ರಾಂಶವು ನನಗೆ ಇಷ್ಟವಾಗಿರಲಿಲ್ಲ. ಸುಮಾರು ೨ ವರ್ಷಗಲ ಕಾಲ ಉಚಿತ ಕನ್ನಡ ತಂತ್ರಾಂಶಕ್ಕಾಗಿ ಹುಡುಕಾಟ ಮಾಡುತ್ತಿದ್ದೆ. ಕೊನೆಗೂ ಪದ ಎಂಬ ತಂತ್ರಾಂಶವು ಸಿಕ್ಕಿ ತುಂಬಾ ಖುಷಿಯಾಯಿತು. ಹಾಗೆಯೀ Android ಮೊಬೈಲಗಲಿಗಾಗಿ ಕನ್ನಡ ತಂತ್ರಾಂಶ ರೂಪಿಸಿದರೆ ಇನ್ನೊ ಅನುಕೂಲವಾಗುತ್ತಿತ್ತು.

  37. Shivakumar

    How to ‘undo’ ? Say sort?

  38. Sridhar

    Hello,
    First of all, congratulations! This is an amazing software. But of course there is scope for improvement. I had prepared a document with tables and saved it. But when I retrieved the document, the table is gone! Is there anyway to get the format back because a good deal of work has to be redone! Hope you can solve this issue.

    1. @pada.pro

      Thank you Sridhar.
      Yes, While saving your document always save as RTF or ODT or HTML file.
      because tables, different fonts etc is called rich text format. If you don’t save as above file types, all those formatting details will be lost 🙁

  39. vidya

    ಪದ ಪೇಜದಲ್ಲಿ ಟೈಪ್ ಮಾಡುವಾಗ ಹಿಂದೂ ಅರೇಬಿಕ್ ಅಂಕಿಗಳು ಬರುವದಿಲ್ಲ. ಬಹಳ ತೊಂದರೆ ಆಗಿದೆ. ಪರಿಹಾರ ತಿಳಿಸಿ. ಎಮ್ ಎಸ್ ಅಫೀಸ್ನಲ್ಲಿ ಟೈಪಿಸುವಾಗ ಕ್ಷ್, ಶ್ ಧ್,ಥ್ ಈ ಅಕ್ಷರಗಳು ಸರಿಯಾಗಿ ಬರುವದಿಲ್ಲ. ಪರಿಹಾರ ತಿಳಿಸಿ. ಪ್ಲೀಜ್.

  40. sarvamangala sakri

    sir,

    pada softeware tumba chennagide adare namage kannada dalli mail kalihisalu gottaguttilla

  41. GOPINATH

    Sir,
    Is it possible open Pada Kannada software in MS word. The purpose is to sorting Kannada districts and others in kannada alphabatical way and to type directly on website in Kannada. Send me to myy email or any tool like for MS word. So far I have not found any tool for Kannada sorting.
    Yours-Gopinath

  42. raghavendra

    IS THIS SOFTWARE FREE?PL MAKE IT FREE FOR MONEY ANYBODY CAN’T BUY YOUR SOFTWARE

    1. @pada.pro

      It is FREE

  43. ವಿದ್ಯಾ

    ಪದ ಪೇಜದಲ್ಲಿ ಟೈಪ್ ಮಾಡುವಾಗ ಹಿಂದೂ ಅರೇಬಿಕ್ ಅಂಕಿಗಳು ಬರುವದಿಲ್ಲ. ಬಹಳ ತೊಂದರೆ ಆಗಿದೆ. ಪರಿಹಾರ ತಿಳಿಸಿ. ಎಮ್ ಎಸ್ ಅಫೀಸ್ನಲ್ಲಿ ಟೈಪಿಸುವಾಗ ಕ್ಷ್, ಶ್ ಧ್,ಥ್ ಈ ಅಕ್ಷರಗಳು ಸರಿಯಾಗಿ ಬರುವದಿಲ್ಲ. ಪರಿಹಾರ ತಿಳಿಸಿ. ಪ್ಲೀಜ್. ಈ ಹಿಂದೆಯೂ ಕೇಳಿದ್ದೇನೆ. ದಯವಿಟ್ಟು ಪರಿಹಾರ ತಿಳಿಸಿ.

  44. t divakara

    ನಮಸ್ತೆ ಲೋಹಿತ್ ರವರೇ,
    ಇತ್ತೀಚೆಗೆ…ಅಂದರೆ ಏಪ್ರಿಲ್ ೮,೨೦೧೪ರಿಂದ ಮೈಕ್ರೊಸಾಫ್ಟ್ ಸಂಸ್ಥೆ ’ವಿಂಡೋಸ್ ಎಕ್ಸಪಿ’ ಮತ್ತು ’ಎಮ್ಮಸ್ ಆಫೀಸ್ ೨೦೦೩’, ಗಣಕನಿರ್ವಹಣಾ ತಂತ್ರಾಂಶ ಮತ್ತು ಕಚೇರಿ ಕಾರ್ಯನಿರ್ವಹಣಾ ತಂತ್ರಾಂಶಗಳಿಗೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆದಿದೆ. ನನಗೆ ಆ ಸಂಸ್ಥೆಯ ಬಗ್ಗೆ ಬಹಳ ಜುಗುಪ್ಸೆಯಾಗಿದೆ. ನಾನು ನನ್ನ ಗಣಕದಲ್ಲಿ ’ವಿಂಡೋಸ್ ಎಕ್ಸಪಿ’ ಕುಸಿಯುವ ಮೊದಲೇ ಅದನ್ನು ಕಿತ್ತುಹಾಕಿ C-DAC ನ ಡೆಬಿಯನ್ ಆಧಾರಿತ BOSS-5 ನ್ನು ಅಳವಡಿಸಿದೆ. ಅದರಲ್ಲಿ ಕನ್ನಡ KGP ಕೀಲಿಮಣೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೊಂದು inscript ಅದರ ಕೀಲಿಮಣೆ ಗುಂಡಿಗಳನ್ನು ಜ್ಙಾಪನದಲ್ಲಿಟ್ಟುಕೊಳ್ಳುವುದು ಕಷ್ಟ. ಸರಿ ನಾನು ಇನ್ನೊಂದು ನಿರ್ವಹಣಾ ತಂತ್ರಾಂಶ ಲಿನಕ್ಸ್ ಸೊಲಾರಿಸ್ ಆಧಾರಿತ opensuse-13.1ನ್ನು ಗಣಕಕ್ಕೆ ಅಳವಡಿಸಿದ್ದೇನೆ. ಅದಕ್ಕೂ ಬಹುಭಾಷಾ ತಂತ್ರಾಂಶ SCIM ಅಳವಡಿಸಿದರೆ ಅದರಲ್ಲೂ ಅದೇ ಹಾಡು. ಕನ್ನಡದ KGP ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

    ಮೂರುದಿನಗಳ ಹಿಂದಷ್ಟೇ ನಿಮ್ಮ ಬಹುಭಾಷಾ ”ಪದ” ತಂತ್ರಾಂಶದ ಬಗ್ಗೆ ತಿಳಿದು ಬಂದದ್ದು. ನಾನು ಈ ವೇಳೆಗಾಗಲೇ ನನ್ನದೇ ಆದ SCIM ಕನ್ನಡ ಕೀಲಿಮಣೆ ಸಿದ್ಧಪಡಿಸಿಕೊಂಡಿದ್ದೆ. ನೀವು ಪದ ತಂತ್ರಾಂಶವನ್ನು ಡೆಬಿಯನ್ ಲಿನಕ್ಸನಲ್ಲಿ ಅಳವಡಿಸುವ ಬಗ್ಗೆ ಮಾತ್ರ ತಿಳಿಸಿದ್ದೀರಿ…ಆದರೆ ಸೊಲಾರಿಸ್-ನಲ್ಲಿ ಅಳವಡಿಸುವ ಬಗ್ಗೆ ನಿಮ್ಮ ಜಾಲಾಂಗಣದಲ್ಲಿ ತಿಳಿಸಿಲ್ಲ. ದಯಮಾಡಿ ಈಬಗ್ಗೆ ಮಾಹಿತಿ ಒದಗಿಸುತ್ತೀರೆಂದು ತಿಳಿಯುತ್ತೇನೆ.

    ನಾನಿನ್ನೂ ”ಪದ” ತಂತ್ರಾಂಶ ಅಳವಡಿಸಿಕೊಂಡಿಲ್ಲ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ.
    ನಿಮ್ಮ ”ಪದ” ಪ್ರಯತ್ನಕ್ಕಾಗಿ ಅಭಿನಂದನೆಗಳು.
    ವಂದನೆಗಳೊಡನೆ,
    ಟಿ.ದಿವಾಕರ

       

  45. k.raghurama bhat

    ಮಾನ್ಯರೇ ವ೦ದನೆಗಳು.ನಾನು ಕನ್ನಡ ಪದ ತ೦ತ್ರಾ೦ಶವನ್ನು ಡೌನ್ ಲೋಡ್ ಮಾದಿಕೊಳ್ಳಲಿಚ್ಛಿಸುತ್ತಿದ್ದು. ಆ ಬಗ್ಗೆ ಮಾಹಿತಿ ಬಯಸುತ್ತೇನೆ.ನನ್ನ ಮೈಲ್ ವಿಳಾಸವನ್ನು ಬರೆದಿದ್ದು.ತಾವು ಅಗತ್ಯವಾದ ಆ ಬಗ್ಗೆ ಮಾಹಿತಿ ನೀದುವಿರೆ೦ದು ಆಶಿಸುತ್ತೇನೆ.ಈಚೆಗಷ್ಟೇ ನಾನಿದನ್ನು ಗಮನಿಸಿದೆ.ದಯವಿತ್ತು ಸಹಕರಿಸುವಿರೆ೦ದು ಭಾವಿಸುತ್ತೇನೆ. ಉತ್ತರದ ನಿರೀಕ್ಷೆಯೊ೦ದಿಗೆ ಸದ್ಯ ವಿರಾಮ. ನಮಸ್ತೇ.

    ಇತಿ ವಿಶ್ವಾಸ ಪೂರ್ವಕ,
    ಕೆ.ರಘುರಾಮ ಭಟ್.

  46. k.raghurama bhat

    ಮಾನ್ಯರೇ,
    ವ೦ದನೆಗಳು. ನುಡಿ ತ೦ತ್ರಾ೦ಶವನ್ನು ಹಾಗೂ ಬರಹವನ್ನು ನಾನು ಬಳಸುತ್ತಿದ್ದು, ನುಡಿ ಸರಿಯಲ್ಲಿ ಕೀಲಿಮಣೆಯ ಕೆಲವು ಅಕ್ಷರಗಳು ಸರಿಯಾಗಿ ಮೂಡುವುದಿಲ್ಲ.ಈಚೆಗೆ ಆಕಸ್ಮಿಕವಾಗಿ ನಿಮ್ಮ ಈ ಪದ ಸೋಫ್ಟ್ ವೇರ್ನಿನ ಈ ತಾಣ ಗಮನಿಸಿದೆ.ಜತೆಗೆ ಅನೇಕ ಮ೦ದಿ ಇದರ ಕುರಿತು ಬರೆದ ಮೆಚ್ಚಿಕೆಯ ಕಮೆ೦ಟನ್ನೂ ಓದಿದೆ. ಇದನ್ನು ಓದಿದ ಮೇಲೆ ನಾನೂ ಇದನ್ನು ಬಳಸಿಕೊಳ್ಳಬೇಕೆ೦ಬ ಆಸಕ್ತಿಯಾಯಿತು.ದಯವಿತ್ತು ಆ ಕುರಿತು ತಮ್ಮಿ೦ದ ಮಾಹಿತಿ ಬಯಸುತ್ತೇನೆ.ತಮ್ಮ ಪ್ರತಿಕ್ರಿಯೆಯನ್ನು ನನ್ನ ಇ-ಮೈಲಿನಲ್ಲಿ ನಿರೀಕ್ಶಿಸುತ್ತೇನೆ.ಉತ್ತರದ ನಿರೀಕ್ಷೆಯಲ್ಲಿ ವಿರಮಿಸುವೆ. ಕೃತಜ್ಞತೆಗಳು.
    ಇತಿ ವ೦ದನೆಗಳೊ೦ದಿಗೆ
    ಕೆ.ರಘುರಾಮ ಭಟ್, ಉಡುಪುಮೂಲೆ,
    ಎಡನೀರು, ಕಾಸರಗೋಡು.

  47. k.raghurama bhat

    ಮಾನ್ಯರೇ,
    ವ೦ದನೆಗಳು.ನನ್ನ ಕೋರಿಕೆಗೆ ತತ್ ಕ್ಷಣ ಸ್ಪ೦ದಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗದೊ೦ದಿಗೆ ಅಭಿನ೦ದನೆಗಳು.ಶ್ರೀ ಸಾಮಾನ್ಯ ಕನ್ನಡಿಗನೂ ಸಹಾ ಇದನ್ನು ಬಳಸಿಕೊಳ್ಳಬಹುದಾಗಿದ್ದು, ಕ೦ನಡ ಭಾಷೆ ಹಾಗೂ ಸಾಹಿತ್ಯಾದ ಅಭಿವೃದ್ಧಿಗೆ ಸಹಕಾರಿಯೆನ್ನುವುದರಲ್ಲಿ ಏರಡು ಮಾತಿಲ್ಲ.ಅತ್ಯುತ್ತಮವಾದ ತಮ್ಮೀ ಕಾರ್ಯವನ್ನು ಅದೆಷ್ಟು ಶ್ಲಾಗಘಿಸಿದರೂ ಸಾಲದು. ಸಾರ್ಥಕವಾದ ನಿಮ್ಮ ಈ ಸತ್ಕಾರ್ಯಕ್ಕೆ ಸಮಸ್ತ ಕನ್ನಡಿಗರ ಪರವಾಗಿ ತಮಗೆ ತು೦ಬು ಹೃದಯದ ಅಭಿನ೦ದನೆಗಳು. ಮು೦ದೆಯೂ ಕೂಡ ಇದರ ಬಳಕೆಯಲ್ಲಿ ನನಗೆ ಯಾವುದೇ ಸ೦ದೇಹಗಳಿದ್ದಲ್ಲಿ ನೇರವಾಗಿ ತಮ್ಮನ್ನು ಸ೦ಪರ್ಕಿಸಬಹುದಷ್ಟೆ ?
    ‘ಪದ’- ದ ಬಳಕೆಯ ಬಗ್ಗೆ ವಿವರವಾದ ಮಾಹಿತಿ(ಪಾಠ)ಗಾಗಿ ತಮ್ಮಿ೦ದ ಸಲಹೆಯನ್ನಪೇಕ್ಷಿಸುತ್ತಾ ಉತ್ತರದ ನಿರೀಕ್ಷೆಯಲ್ಲಿ ಮತ್ತೊಮ್ಮೆ ಕೃತಜ್ಞತೆಗಳೊ೦ದಿಗೆ ಅಭಿನ೦ದನೆಗಳು.
    ಇತಿ,
    ಕೆ.ರಘುರಾಮ ಭಟ್, ಉಡುಪುಮೂಲೆ,
    ಅ೦ಚೆಃ ಎಡನೀರು, ಕಾಸರಗೋಡು.

  48. srinivas

    pada software not downlodging

    1. @pada.pro

      https://www.pada.pro/download/Pada-5.0-Windows-Portable-release_3.zip
      download the new Pada 5.0 version and let us know.

  49. nagesh kumar cs

    ಮಾನ್ಯರೆ
    ನಿಮ್ಮ ಪದ ೪.೧ ನಾನು ಇನ್ಸ್ಟಾಲ್ ಮಾಡಿಕೊಂಡಿದ್ದೇನೆ.
    ಅದರಲ್ಲಿ ನನಗೆ unicode ಮಾತ್ರ ಬರುತ್ತದೆ. ಆದರೆ ಕನ್ನಡ ಪತ್ರಿಕೆಯವರು ನನ್ನ ಲೇಖನಗಳನ್ನು nudi/ baraha ದಲ್ಲಿ ASCII fonts ನಲ್ಲಿ ಕೇಳುತ್ತಾರೆ.
    ನಿಮ್ಮ ಸಾಫ್ಟ್‌ವೇರ್ ನಿಂದ ನಾವು uniode to ascii- NUDI fonts ಗೆ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವೆ..
    ಇಲ್ಲವಾದಲ್ಲಿ ಹೇಗೆ ಮಾಡುವುದು?
    ನಮಸ್ಕಾರಗಳು
    ನಾಗೇಶ್ ಕುಮಾರ್ ಸಿ ಎಸ್
    ಚೆನ್ನೈ

    1. @pada.pro

      ಈಗ ಪದ IME 3.0 ಬಂದಿದೆ.
      https://www.pada.pro/download/Pada-5.0-Windows-Portable-release_3.zip
      ಇದರಲ್ಲಿ ANSI-NUDI-BARAHA ಪಠ್ಯವನ್ನು ಟೈಪಿಸಬಹುದು. ಒಮ್ಮೆ ಪ್ರಯಾತ್ನಿಸಿ

  50. narayanarao

    ಮಾನ್ಯರೇ, ಟೇಬಲಿನೊಳಗಿನ ವಿವರಗಳು ಸೇವ್ ಮಾಡಿದ ಕಡತವನ್ನು ನಂತರ ಪುನ: ಓದಲು ತೆಗೆದಾಗ ಟೇಬಲ್ ಮೊದಲಿನಂತೆ ಉಳಿಯದೇ ಮಾಯವಾಗಿ ವಿವರಗಳು ಮಾತ್ರ ಒಂದರ ಕೆಳಗೆ ಒಂದರಂತೆ ಮೂಡಿ ಬರುತ್ತವೆ.ಟೇಬಲಿನ ಜೊತೆಯೇ ಉಳಿಯಲು ಏನು ಮಾಡಬೇಕೆಂದು ತಾವು ದಯವಿಟ್ತು ತಿಳಿಯಿಸಿಕೊಡಿರಿ.
    ವಂದನೆಗಳು.
    ನಾರಾಯಣರಾವ್

    1. @pada.pro

      ನೀವು save ಮಾಡುವಾಗ html, odt or rtf file ಅಂತ ಸೇವ್ ಮಾಡಿ. ಆಗ ಟೇಬಲ್ ಉಳಿಯುತ್ತೆ

  51. ನಾರಾಯಣರಾವ್

    ಮಾನ್ಯರೇ,
    ಟೇಬಲಿನೊಳಗಿನ ವಿವರಗಳು ಸೇವ್ ಮಾಡಿದ ಕಡತವನ್ನು ನಂತರ ಪುನ: ಓದಲು ತೆಗೆದಾಗ ಟೇಬಲ್ ಮೊದಲಿನಂತೆ ಉಳಿಯದೇ ಮಾಯವಾಗಿ ವಿವರಗಳು ಮಾತ್ರ ಒಂದರ ಕೆಳಗೆ ಒಂದರಂತೆ ಮೂಡಿ ಬರುತ್ತವೆ.
    ಟೇಬಲಿನ ಜೊತೆಯೇ ಉಳಿಯಲು ಏನು ಮಾಡಬೇಕೆಂದು ತಾವು ದಯವಿಟ್ತು ತಿಳಿಯಿಸಿಕೊಡಿರಿ.
    ವಂದನೆಗಳು.
    ನಾರಾಯಣರಾವ್

    1. @pada.pro

      ನೀವು save ಮಾಡುವಾಗ html, odt or rtf file ಅಂತ ಸೇವ್ ಮಾಡಿ. ಆಗ ಟೇಬಲ್ ಉಳಿಯುತ್ತೆ

  52. ವಿದ್ಯಾ

    ಮಾನ್ಯರೇ ತಮ್ಮ ಪದ ಸಾಫ್ಟ್ ವೇರ್ ನನಗೆ ಬಹಳ ಉಪಯೋಗವಾಗಿದೆ. ನಾನು ಸುಮಾರು ಒಂದು ಒಂದೂವರೆ ವರ್ಷದಿಂದ ಬಳಸುತ್ತಿರುವೆ. ಎಲ್ಲಾ ಕಡೆಗಳಲ್ಲೂ ಕನ್ನಡ ಬಳಸಲು ಬರುವಂತಾಗಿದೆ. ನಾನೊಬ್ಬ ಶಿಕ್ಷಕಿ ಆಗಿದ್ದರಿಂದ ನನಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಇತ್ಯಾದಿ ಬಹಳೇ ಅನುಕೂಲ ಆಗಿದೆ. ಆದರೆ ಈ ತಂತ್ರಾಂಶದಲ್ಲಿ ಒಂದು ಸಣ್ಣ ತೊಂದರೆ ಆಗಿದೆ. ಅದೇನೆಂದರೆ ನಾನು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಕನ್ನಡ ಟೈಪಿಸುವಾಗ ಧ ಇದನ್ನು ಟೈಪಿಸಿದರೆ ಮೊದಲು ದ ನಂತರ ಧ ಮೂಡುತ್ತದೆ. ಹಾಗೇ ಭ ಕೂಡ ಮೊದಲು ಬ ನಂತರ ಭ ಬರುತ್ತದೆ. ಭಾರತ ಟೈಪಿಸಬೇಕೆಂದರೆ ಬಭಾರತ ಮೂಡುತ್ತದೆ. ಧಾರಣ ಬರೆಯಬೇಕೆಂದರೆ ದಧಾರಣ ಮೂಡುತ್ತದೆ. ಕ್ಷ ಜ್ಞಾ ಇಂಥ ಅಕ್ಷರಗಳು ಬರೆಯಲು ಬಹಳ ತೊಂದರೆ ಆಗುತ್ತಿದೆ. ಈ ಸಮಸ್ಯೆ ಕೇವಲ ಎಂ ಎಸ್ ವರ್ಡ್ ನಲ್ಲಿ ಮಾತ್ರ ಇದೆ. ಉಳಿದೆಡೆಗಳಲ್ಲಿ ಎಲ್ಲವೂ ಸರಿಯಾಗಿ ಮೂಡುತ್ತವೆ. ನಾನು ಮೊದಲು ಎಂ ಎಸ್ ಪ್ಯಾಡ್ ನಲ್ಲಿ ಟೈಪಿಸಿಕೊಂಡು ನಂತರ ವರ್ಡ್ ನಲ್ಲಿ ಟೈಪಿಸಬೇಕಾಗಿದೆ. ಹಾಗೇನೇ ಹಿಂದಿಯಲ್ಲಿ हँ ಹ್ಞಾ ಈ ಅಕ್ಷರದ ಮುಂದಿನ ಲಂಬಗೆರೆ ಟೈಪ್ ಆಗುವದಿಲ್ಲ. ಎಲ್ಲಾ ಕಡೆ ಈ ಸಮಸ್ಯೆ ಇದೆ. ನಾನೀಗ ಇಲ್ಲಿ ಹ್ಞಾ ಟೈಪಿಸಲು ಸಾಧ್ಯವಾಗದೇ ಹ್ಞ ಟೈಪಿಸಿದ್ದೇನೆ. ಹೀಗೆ ಕೆಲವು ತೊಂದರೆಗಳಿವೆ. ದಯವಿಟ್ತು ಪರಿಹಾರ ತಿಳಿಸಿ.

    1. @pada.pro

      ಧನ್ಯವಾದಗಳು ಮೇಡಂ.
      ಪದ 5.0 ಬಂದಿದೆ.
      ಇದರಲ್ಲೂ ಈ ತಪ್ಪು ಇದ್ದರೆ, ಪರೀಕ್ಷಿಸಿ ಸರಿಪಡಿಸಲಾಗುವುದು

  53. Kantaraj T

    Hi Lohith,
    It is me your bother-in-law’s, brother-in-law.
    Happy New Year – 2017.
    How do I write Kannada half letters. For ex: Kantaraj
    Thanks & Best wishes.
    Kantaraj Tavane

    1. @pada.pro

      🙂
      Sorry about he delay!
      key-f is used for ardhakshara.

  54. K GANESH BHATT

    ಆತ್ಮೀಯರೇ,
    ನಮಸ್ಕಾರಗಳು.

    ಪದ ಐ ಎಮ್ ಇ ಯಲ್ಲಿ ತುಳು ಲಿಪಿಯ ಶ್ರೀಹರಿ ಅಕ್ಷರದ ಜೋಡಣೆ ಹೇಗೆಂದು ತಿಳಿಸ ಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ

    ಇತೀ ತಮ್ಮವ,
    ಕಿದಿಯೂರು ಗಣೇಶ ಭಟ್ಟ
    ಹೈದರಾಬಾದು
    ೯೭೦೪೧೩೫೯೩೩

  55. venki

    rally ಅಂತ ಟೈಪ್ ಮಾಡಿದ್ರೆ ರ್ಯಾಲಿ ಅಂತ ಟೈಪ್ ಆಗುತ್ತೆ 🙁

  56. Lakshmikanth

    ಕನ್ನಡ ತಂತ್ರಾಂಶವನ್ನು ಕೊಟ್ಟಿದಕ್ಕೆ ಬಹಳ ಧನ್ಯವಾದಗಳು. ಇದಕ್ಕೊ ಮೊದಲು ನಾನು ಯೂನಿಕೋಡ್ ಕನ್ನಡ ತಂತ್ರಾಂಶಕ್ಕಾಗಿ ಹುಡುಕಾಟ ಮಾಡುತ್ತಿದ್ದೆ. ಕೊನೆಗೂ ಪದ ಎಂಬ ತಂತ್ರಾಂಶವು ಸಿಕ್ಕಿ ತುಂಬಾ ಖುಷಿಯಾಯಿತು. ಹಾಗೆಯೀ Macintosh (Mac OS X) ಗೂ ಕನ್ನಡ ತಂತ್ರಾಂಶ ರೂಪಿಸಿದರೆ ಇನ್ನೂ ಅನುಕೂಲವಾಗುತ್ತಿತ್ತು.

  57. Nishchith

    I am not able to convert Kannada fonts into Malayalam, only boxes appear instead. Can you please guide me through this problem???

    1. @pada.pro

      install malayalam fonts also

  58. Divakara Dongre

    ಮಾನ್ಯರೇ,
    ಬೆರಳಚ್ಚಿಸಿದ ಬರಹವೆಲ್ಲ ಇದ್ದಕ್ಕಿದ್ದಂತೆ ????? ಮಾರ್ಕ್ ಗಳಿಂದ ತುಂಬಿದೆ. ಸರಿಪಡಿಸುವುದು ಹೇಗೆಂದು ತಿಳಿಸುವಿರಾ..
    ವಂದನೆಗಳೊಂದಿಗೆ
    ದಿವಾಕರ ಡೋಂಗ್ರೆ

    1. @pada.pro

      namaste
      ನೀವು ಪದ ಮೆನು ನಲ್ಲಿ “Encoding” ಎಂದಿರುವ ಕಡೆ, ANSI select ಮಾಡಿದ್ದರೆ ಆ ರೀತಿ ಆಗುತ್ತದೆ.
      ANSI ಬಿಟ್ಟು ಬೇರೆ ಯಾವುದಾದರೂ encoding select ಮಾಡಿ ನಂತರ save ಮಾಡಿ.

    2. @pada.pro

      file save ಮಾಡುವಾಗ ನೀವು ತಪ್ಪಿ MENU->Encoding -> ANSI ಅಂತ ಸೆಲೆಕ್ಟ್ ಮಾಡಿದ್ದೀರಿ ಎನಿಸುತ್ತೆ.

  59. Shashidharan C G

    I am not able to read anything whatever I have saved; instead it is showing innumerable question marks like ?????

    Please enlighten me how to get back whatever I have typed already so far.

    Thank you sir.

    1. @pada.pro

      for which language did you try?
      Did you install suitable unicode fonts for that language?
      google has come with good stylish unicode fonts all Indian languages;
      Google them and download and install; it will work

  60. K GANESH BHATT

    Dear Sir,
    Im using PADA IME under Win10 but found problem that:
    IME language turns to English automatically after some time. But PADA IME status shows active language is Kannada.
    Once this problem starts, I have to quit PADA IME and relod Pada IME once again and it will run for 5 -6 min only. Again the same probelm repeats. I tried uninstalling PADA software and reinstalling. But problem NOT solved. Please suggest.
    THANKING YOU.

    1. @pada.pro

      ಗಣೇಶ್

      please try pada software version 5.0
      https://www.pada.pro/download/Pada-5.0-Windows-Portable-release_3.zip

      and let us know

  61. Vanaraja B K

    ಕನ್ನಡದಲ್ಲಿ ಅವಗ್ರಹ ಚಿಹ್ನೆಯನ್ನು ಬಳಸುವುದು ಹೇಗೆ?
    ಹಾಗೂ
    ಹಿಂದಿಯಲ್ಲಿ ಅವಗ್ರಹ ಚಿಹ್ನೆಯನ್ನು ಬಳಸುವುದು ಹೇಗೆ?

  62. Shishira K.V.

    ನಮಸ್ತೆ.
    ಎಂಎಸ್ ವರ್ಡ್ ೨೦೧೯ ರಲ್ಲಿ ಕನ್ನಡ ಬರೆಯುವಾಗ “ಸ್ಥೈರ್ಯ”, “ಸೂಕ್ಷ್ಮ”, “ನಿಷ್ಪ್ರಯೋಜಕ”, “ಮುಗ್ಧ” ಪದಗಳನ್ನು ಬರೆಯಲು ಪ್ರಯತ್ನಿಸಿದಾಗ “ಸ್ತಥೈರ್ಯ”, “ಸೂಕ್ಶಷ್ಮ”, “ನಿಶಷ್ಪ್ರಯೋಜಕ”, “ಮುಗ್ದಧ” ಎಂದು ಆಗುತ್ತಿದೆ. ಇಲ್ಲಿ ಉಲ್ಲೇಖಿಸದ ಇನ್ನೂ ಹಲವು ಪದಗಳು ಇರಬಹುದು. ಮುಖ್ಯವಾಗಿ ಎರಡು ಒತ್ತಕ್ಷರಗಳು ಬಂದಾಗ ಮಾತ್ರ ಸಮಸ್ಯೆ ಕಾಣಿಸುತ್ತಿದೆ. ಈ ಸಮಸ್ಯೆ ವರ್ಡ್ ೨೦೧೯ ತಂತ್ರಾಂಶದಲ್ಲಿ ಮಾತ್ರ ಆಗುತ್ತಿದೆ. ಏನು ಮಾಡಬಹುದು ತಿಳಿಸಿ.
    ಧನ್ಯವಾದಗಳು.

    1. @pada.pro

      ಸ್ಥೈರ್ಯ
      ಈಗ ಪದ 5.0 pada-ime ಯಿಂದ ಬರೆದದ್ದು. ನೀವೂ ಪ್ರಯತ್ನಿಸಿ
      https://www.pada.pro/download/Pada-5.0-Windows-Portable-release_3.zip

  63. ಮನಮೋಹನ್

    ನಮನಗಳು
    ನಾನು ಡೇಬಿಯನ್ ೧೦ ಮತ್ತು ಉಬುಂಟು ೨೦.೦೪ ರಲ್ಲಿ ಪದ ಉಪಯೋಗಿಸಲು ಸಾದ್ಯವಾಗುತ್ತಿಲ್ಲವಲ್ಲ. ಏನಾದರು ದಾರಿ ಇದೆಯೇ? ಇನ್ಸ್ಟಾಲ್ ಮಾಡಲೇ ಆಗುತ್ತಿಲ್ಲ

    1. @pada.pro

      ಆದಷ್ಟು ಬೇಗ ಪದ 5.0 ಉಬುಂಟು ವರ್ಷನ್ ಬರುತ್ತೆ;
      ವಿಂಡೋಸ್ ವರ್ಷನ್ ಈಗ ಬಂದಿದೆ/ https://www.pada.pro/download/Pada-5.0-Windows-Portable-release_3.zip

  64. Manmohan K

    Namaste

    I am not able to install pada in Ubuntu 20.04 and Debian 10.
    Any tips please.

    1. @pada.pro

      ನಮಸ್ತೆ
      soon Pada 5.0 will be made avaialble for Ubuntu Latest version

  65. kadalurugowda

    ಮಾನ್ಯರೆ ದಯಮಾಡಿ ವಿಂಡೋಸ್‌ನ ೬೪ ಬಟ್‌ ಆಪರೆಟಿಂಗ್‌ ಸಿಸ್ಟಮ್‌ನಲ್ಲಿಯೂ ಪದ ತಂತ್ರಾಂಶ ಕೆಲಸ ಮಾಡುವಂತೆ ಮಾಡಿರೆಂದು ಮನವಿ ಮಾಡುತ್ತೇವೆ.

  66. Subrahmanyam Kendole

    when I type in Telugu and Malayalam, it displays only Black color Squares, not those Telugu or Malayalam characters. What is remedy?

    1. @pada.pro

      Please download suitable Telugu & Malayalam Unicode fonts for example
      for telugu : https://fonts.google.com/specimen/Ramabhadra?subset=telugu
      for malayalam : https://fonts.google.com/specimen/Manjari?subset=malayalam

  67. Rakesh

    ನಮಸ್ತೇ!

    Thank You for the wonderful software created!

    I am finding one issue in the Pada software.

    While trying to convert the script from the “script convertor” option from Kannada to other languages, it is working perfectly except for conversion to Telugu and Malayalam. Whenever I try to convert to Telugu, it will show the text in boxes.

    Please guide me as to how I can fix this problem.

    1. @pada.pro

      You should have a suitable Telugu Unicode Font

  68. Subrahmanyam Kendole

    ನಾನು ಅನೇಕ ವರ್ಷ ಈ “ಪದ” ತಂತ್ರಾಂಶವನ್ನು ಪ್ರತಿದಿನವೂ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಳಸುತ್ತಿದ್ದೆ. ನನ್ನ ಕಂಪ್ಯೂಟರ್‌ನಲ್ಲಿ Xp Operating System ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಆದರೆ, ನೆನ್ನೆಯಿಂದ OS ಅನ್ನು Windows 10ಗೆ ಬದಲಾಯಿಸಿಕೊಂಡ ಬಳಿಕ ತೆಲುಗು ಅಕ್ಷರಗಳು ಬಾರದೆ, ಕಪ್ಪನೆ ಚೌಕಗಳು ಕಾಣುತ್ತಿವೆ. ಹೇಗೆ ಸರಿಪಡಿಸಿಕೊಳ್ಳುವುದು?

  69. Shashidharan C G

    ಎಂದಿನಂತೆ ಇಂದು ‘ಪದ’ ಫೈಲ್ ತೆರೆದಾಗ, ನನ್ನ ಹಿಂದಿನ ಎಲ್ಲ ಮಾಹಿತಿಗಳ ಅಕ್ಷರಗಳೂ “????” ಪ್ರಶ್ನಾರ್ಥಕ ಚಿಹ್ನೆಯಿಂದ ಕೂಡಿದ್ದು, ಎಲ್ಲ ಮಾಹಿತಿಗಳೂ ಅಳಿಸಿಹೋಗಿದೆ.

    ಆದ್ದರಿಂದ ಇದಕ್ಕೆ ಪರಿಹಾರ ಕೊಡುವಿರೆಂದು ನಂಬಿದ್ದೇನೆ.

  70. Nagaraj L R

    Dear Mr Jagadish

    I havebeen using your softwre for quite some time.. When I close after saving document, some time a message appeared stating ‘soft ware is not responding’. when I open next time I notice the end lines and some time one are two paras founD missing. Please helpme

  71. Sudhakara Jain

    ದಯಮಾಡಿ ನಮ್ಮ ಈ ಪದಕನ್ನಡವನ್ನು ಐ ಫೋನ್ ಕುಟುಂಬಕ್ಕೂ ಕರುಣಿಸಬಹುದೇ

    1. @pada.pro

      ಮಾಡಬಹುದು ಸುಧಾಕರ್ ಅವರೆ

Leave a Reply to Ramagopal Ks Cancel reply

Your email address will not be published. Required fields are marked *