«

»

ಪದ IME ಬಳಸುವುದು ಹೇಗೆ?

ನಮಸ್ತೆ,

ಪದ IME ಯನ್ನು ಬಳಸಿ, ಕನ್ನಡ (or other Indic scripts) ಲಿಪಿಯನ್ನು ನೇರವಾಗಿ ಇತರ Windows ಅಪ್ಲಿಕೇಷನ್‌ಗಳಲ್ಲಿ ಕೀಲೀಕರಿಸ(Typing) ಬಹುದು ಎಂದು ಈಗಾಗಲೇ ತಿಳಿಸಿಯಾಗಿದೆ. ಆದರೆ ಹೇಗೆ ಬಳಸುವುದು? ಅಥವಾ ಹೇಗೆ ಆರಂಭಿಸುವುದು? ಎನ್ನುವುದನ್ನು ಎಲ್ಲೂ ವಿವರಿಸಿಲಿರಲಿಲ್ಲ.ಈಗ ಇದೇ ವಿಷಯವನ್ನು ಸ್ವಲ್ಪ ವಿವರವಾಗಿ ತಿಳಿದುಕೊಳ್ಳೋಣ.

ಮೊದಲು ಪದ IME ಯನ್ನು ಆರಂಭಿಸಬೇಕು.

ಸನ್ನಿವೇಶ 1) ನೀವು ಪದ ತಂತ್ರಾಂಶವನ್ನು Install ಮಾಡಿಕೊಂಡಿದ್ದರೆ ,

ಮೊದಲು ನಿಮ್ಮ ಗಣಕದ ಎಡ-ಕೆಳ ಮೂಲೆಯಲ್ಲಿರುವ Start ಬಟನ್‌ನಿಂದ ಆರಂಬಿಸಿ.

Start -> All Programs -> Pada Software -> PadaIME

ಸನ್ನಿವೇಶ 2) ನೀವು ಪದ ತಂತ್ರಾಂಶದ ಪೊರ್ಟಬಲ್ ಅಥವಾ Zipped folder ಡೌನ್‌ಲೋಡ್‌ ಮಾಡಿಕೊಂಡಿದ್ದರೆ

ಮೋದಲು ಒಂದು ಹೊಸ folder ನಲ್ಲಿ  unzip ಮಾಡಿಕೊಳ್ಳಿ. ಈಗ ಆ Folder ನಲ್ಲಿ PadaIME ಎನ್ನುವ exe file ಇರುತ್ತದೆ. ಅದರ ಮೇಲೆ ಡಬಲ್‌ ಕ್ಲಿಕ್ ಮಾಡಿ.

ಈಗ ನೀವು ಪದ IME ಯನ್ನು ಯಶಸ್ವಿಯಾಗಿ ಆರಂಭಿಸಿದ್ದೀರಿ.ಇದನ್ನು ಖಾತ್ರಿ ಪಡಿಸಿಕೊಳ್ಳಲು, ನಿಮ್ಮ ಗಣಕದ ಬಲ-ಕೆಳ ಮೂಲೆಯಲ್ಲಿ ಹಳದಿ ಬಣ್ಣದ ಒಂದು ಹೊಸ ಐಕಾನ್‌ ಬಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನೋಡಿ.

ಈಗ ಎರಡನೇ ಹೆಜ್ಜೆ. ಕನ್ನಡವನ್ನ ಬೇರೆ ಅಪ್ಲಿಕೇಷನ್‌ಗಳಲ್ಲಿ ನೇರವಾಗಿ ಬರೆಯುವುದು ಹೇಗೆ ?

ಮೇಲೆ ಲಗತ್ತಿಸಿರುವ ಚಿತ್ರವನ್ನು ಒಮ್ಮೆ ಗಮನಿಸಿ.

ಮೇಲೆ ತೋರಿಸಿದಂತೆ ನೀವು ಯಾವ ಲಿಪಿಯಲ್ಲಿ ಬರೆಯ ಬೇಕೆಂದಿದ್ದೀರಿ? ಎಂದು ಮೊದಲು ಆಯ್ಕೆ ಮಾಡಿಕೊಳ್ಳಿ. ಆ ನಂತರ ಅದೇ ರೀತಿ ನಿಮಗೆ ಹೆಚ್ಚು ಅನುಕೂಲವೆನಿಸುವ ಕೀಲಿಮಣೆಯ ವಿನ್ಯಾಸವನ್ನುಆಯ್ದು ಕೊಳ್ಳಿ.

ಈಗ  ಉದಾಹಣೆಗೆ wordpad ಅಥವಾ FireFox  ಓಪನ್‌ ಮಾಡಿ.
ಅದರಲ್ಲಿ ಯಾವ ಡಬ್ಬಿಯಲ್ಲಿ ಕನ್ನಡವನ್ನು ಬರೆಯ ಬೇಕೆಂದಿದ್ದೀರಿ? ಮೊದಲು ಅದನ್ನು ನಿಮ್ಮ ಮೌಸ್ ಮೂಲಕ ಅಥವಾ ಕೀಬೋರ್ಡ್ ಮೂಲಕ ಆಯ್ದುಕೊಳ್ಳಿ. ಅಷ್ಟೇ,ಕನ್ನೆಡ (Unicode) ದಲ್ಲಿ ಟೈಪಿಸಲು ಈಗ ನೀವು ಸನ್ನದ್ದರಾಗಿದ್ದೀರಿ, ಧನ್ಯವಾದಗಳು. 🙂
ಸೂಚನೆ:
ನೀವು Windows ‍XP ಉಪಯೋಗಿಸುತ್ತಿದ್ದರೆ, MS Word ಅಪ್ಲಿಕೇಷನ್‌ನಲ್ಲಿ ಮೇಲೆ ತಿಳಿಸಿದಂತೆ ಕನ್ನಡದಲ್ಲಿ ಬರೆಯುವಾಗ ಖಾಲಿ ಡಬ್ಬಿಗಳು ಕಾಣಿಬಹುದು. ಈ ರೀತಿ ಸಮಸ್ಯೆ ಎದುರಾದರೆ, Fontನ್ನು Arial MS Unicode ಗೆ ಬದಲಿಸಿ. ಸಮಸ್ಯೆಗೆ ಮೊದಲ ಚಿಕಿತ್ಸೆ ನೀಡಿದಂತಾಗುತ್ತದೆ.

Permanent link to this article: https://www.pada.pro/%e0%b2%aa%e0%b2%a6-ime-%e0%b2%ac%e0%b2%b3%e0%b2%b8%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/

52 comments

Skip to comment form

  1. Shivaram Kalmady

    ದನ್ಯವಾದಗಳು ನನ್ನ ಸಮಸ್ಯೆಗೆ ಉತ್ತರ ಸಿಕ್ಕಿತು. ಚೆನ್ನಾಗಿದೆ ಉಪಯೋಗಿಸಲ್ಲಿಕ್ಕೆ. ಈಗ ಮಕ್ಕಳು ಕಂಪ್ಯೂಟರ್ ಉಪಯೋಗಿಸುತ್ತಿದ್ದಾರೆ. ಹಾಗಾಗಿ ನನಗೆ ಸಿಗುವುದು ಅಪರೂಪ. ಈವತ್ತು ಪದ 4.1 ಡೌನ್ ಲೋಡ್ ಮಾಡಿ ಉಪಯೋಗಿಸಿದೆ.

    1. @pada.pro

      ನಮಸ್ತೆ
      ಹೇಗಿದ್ದೀರಿ?

      ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

  2. ಶ್ರೀನಿವಾಸ ಮೂರ್ತಿ.ಬಿ.ಆರ್‌.

    ಮೊಟ್ಟಮೊದಲಿಗೆ ನಿಮಗೆ ನನ್ನ ಧನ್ಯವಾದಗಳು. ಇ‍ಷ್ಟು ಚೆಂದದ ತಂತ್ರಾಂಶವು ಹಣ ಪಾವತಿಸದರೂ ಸಿಕ್ಕಿರಲಿಲ್ಲ. ನಾನು ಮುಂಚೆ ಖರೀದಿ ಮಾಡಿದ ಬರಹ ಯೂನಿಕೋಡ್‌ನ್ನು ಬಳಸುತ್ತಿದ್ದೆ. ಅದು ಕೆಲವೊಮ್ಮೆ ಅಥವ ಗಣಕವನ್ನು ಬೂಟ್‌ ಮಾಡಿದಾಗ ಹೊಸ ಪಾಸ್‌ವರ್ಡ್‌ಗಾಗಿ ಕೇಳುತ್ತಿತ್ತು. ಅದೂ ಸಹ ಒಂದೇ ಕಂಪ್ಯೂಟರ್‌ಗಾಗಿ ಮಾತ್ರ ನಡೆಯುತ್ತಿತ್ತು. ನಾವು ಹೊಸದಾಗಿ ಪಾಸ್‌ವರ್ಡ್‌ ತೆಗೆದುಕೊಳ್ಳಲು ಕನಿಷ್ಟ ಒಂದು ದಿನ ಬೇಕಾಗುತ್ತಿತ್ತು ಹಾಗೆಯೇ ಅದು ತ್ರಾಸ ಅನ್ನಿಸುತ್ತಿತ್ತು. ಈಗ ಕನ್ನಡ ಯೂನಿಕೋಡ್‌ ಬಳಸುವುದು ಅತ್ಯಂತ ಸುಲಭವಾಗಿದೆ ಮತ್ತು ಸರಳವಾಗಿದೆ. ಅದಲ್ಲದೇ ಎಲ್ಲರೂ ಉಚಿತವಾಗಿ ಎಲ್ಲಾ ಕಡೆಯೂ ಬಳಸಬಹುದಾಗಿದೆ. ಇದು ಕರ್ನಾಟಕ ಸರ್ಕಾರದ ನುಡಿ ತಂತ್ರಾಂಶಕ್ಕೆ ತುಂಬಾ ಹೋಲುವುದು. ಸರ್ಕಾರದ ವತಿಯಿಂದ ಮಾಡಬೇಕಾಗಿದ್ದ ಈ ಯೂನಿಕೋಡ್‌ ತಂತ್ರಾಂಶದ ಕೆಲಸವನ್ನು ನೀವು ಮಾಡಿರುವುದಕ್ಕೆ ನಿಮಗೆ ಅಭಿನಂದನೆಗಳು. ಈ ತಂತ್ರಾಂಶವು ಇನ್ನೂ ಹೆಚ್ಚಿಗೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು(ವಿಶೇ‍ವಾಗಿ ಸರ್ಕಾರಿ ಇಲಾಖೆಗಳಲ್ಲಿ) ಆಗ ಕನ್ನಡ ಬಳಕೆಯು ಹೆಚ್ಚಾಗುವುದು ಮತ್ತು ದೀರ್ಘಕಾಲ ಉಳಿಯುವುದು. ದಯವಿಟ್ಟು ನೀವುಗಳು ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧಪಟ್ಟವರಿಗೆ ಈ ಅದ್ಭುತವಾದ ತಂತ್ರಾಂಶದ ಬಗ್ಗೆ ತಿಳಿಸಿ ಹೇಳಿ.
    ಎಲ್ಲರೂ ಹಣವನ್ನು ಹಿಂಬಾಲಿಸುತ್ತಿರುವಾಗ, ನೀವು ಕನ್ನಡದ ಏಳಿಗೆಗಾಗಿ ಶ್ರಮವಹಿಸುತ್ತಿರುವುದಕ್ಕೆ ನಿಮಗೆ ತುಂಬಾ ತುಂಬಾ ಅಭಿನಂದನೆಗಳು.
    ಧನ್ಯವಾದಗಳೊಂದಿಗೆ….

    ಶ್ರೀನಿವಾಸ ಮೂರ್ತಿ.ಬಿ.ಆರ್‌.

    1. @pada.pro

      ನಮಸ್ಯೆ ಶ್ರೀನಿವಾಸ್‌ರವರೇ,
      ನಿಮಗೂ ಮನಃಮೂರ್ವಕ ಧನ್ಯವಾದಗಳು.
      ನೀವು ಇನ್ನಷ್ಟು ಕನ್ನಡಿಗರಿಗೆ ಪದ ತಂತ್ರಾಂಶವನ್ನು ಪರಿಚಯ ಮಾಡಿಸಿ.
      ನಿಮ್ಮ ಪ್ರೀತಿ,ಅಭಿಮಾನ ಇದೇ ರೀತಿ, ಪದ ತಂತ್ರಾಂಶಕ್ಕೆ ಸದಾ ಸಿಗಲಿದೆ ಎಂದು ಭಾವಿಸುತ್ತೇವೆ.
      ಮತ್ತೊಮ್ಮೇ ತುಂಬು ಹೃದಯದ ಧನ್ಯವಾದಗಳು

    2. vasanthi

      pls sir how to download plz sent website kannada

      1. @pada.pro

        click this link https://www.pada.pro/download/Pada-5.0-Windows-Portable-release_3.zip to download latest version Pada 5.0

  3. ಚಂದ್ರಶೇಖರ ಎನ್

    ಉಪಯೋಗಿಸುವ ವಿಧಾನವನ್ನು ತಿಳಿಸಿದ್ದು ತುಂಬಾ ಸಹಾಯಕಾರಿಯಾಗಿದೆ.
    ನಾನು ಓಪನ್ ಆಫೀಸಿನಲ್ಲಿ ಟೈಪ್ ಮಾಡುವಾಗ ಬಾಕ್ಸ ಬರುತ್ತಿದ್ದವು. ಈಗ ಅದು ಇಲ್ಲದೇ ಕನ್ನಡ ಅಕ್ಷರಗಳು ಚೆನ್ನಾಗಿ ಮೂಡುತ್ತಿವೆ. ಧನ್ಯವಾದಗಳು.
    ನುಡಿ ಫಾಂಟ್‌ನಿಂದ ಯೂನಿಕೋಡ್‌ಗೆ ಬದಲಾಯಿಸಲು ಸಾಧ್ಯವಿದ್ದಲ್ಲಿ ಅದನ್ನೂ ತಿಳಿಸಿದರೆ, ಉಪಯೋಗವಾಗುವುದು. ತುಂಗಾ ಹೊರತುಪಡಿಸಿ ಇತರ ಯೂನಿಕೋಡ್ ಫಾಂಟ್‌ಗಳನ್ನೂ ಸಹ ಪದ ವೆಬ್‌ಸೈಟಿನಲ್ಲಿ ಡೌನ್‌ಲೋಡ್‌ ಮಾಡಲು ಅನುಕೂಲ ಕಲ್ಪಿಸಲು ವಿನಂತಿಸುತ್ತೇನೆ.
    ವಂದನೆಗಳು.

    1. @pada.pro

      ನಮಸ್ತೆ ಚಂದ್ರಶೇಖರ್‌ರವರೇ,
      ನಿಮಗೆ ಪದ ತಂತ್ರಾಂಶವು ಪರಿಚಯವಾಗಿದ್ದಲ್ಲದೇ ಇತರರ ಸಹಾಯವು ಇಲ್ಲದೇ ನಿಮ್ಮ ಮತ್ತೊಂದು (ಓಪನ್‌-ಆಪೀಸ್‌) ಸಮಸ್ಯೆಯೂ
      ಪರಿಹಾರವಗಿದ್ದಕ್ಕೆ ಸಂತೋಷವಾಯಿತು.

      ನುಡಿಯಲ್ಲಿ ರಚಿಸಿದ ಕಡತಗಳನ್ನು ನಿಮ್ಮ ಗಣಕ ತೆರೆಯಿಂದ, ನೇರವಾಗಿ ಪದ ತಂತ್ರಾಂಶದ ಮುಖ್ಯ ಕಿಡಕಿ (Window)ಯ ಮೇಲೆ ಎಳೆದು ಹಾಕಿ.
      ಅಂದರೆ Drag and Drop ಮಾಡಿ. ಆಗ ಪದದಲ್ಲಿ ನುಡಿ ಅಕ್ಷರಗಳು ನೇರವಾಗಿ ಯೂನಿಕೋಡ್‌ನಲ್ಲಿ ತೆರೆದುಕೊಳ್ಳುತ್ತವೆ.
      ಈಗ ಈ ಹೊಸ ಕಡತವನ್ನು ಇನ್ನೊಂದು ಹೆಸರಿನಲ್ಲಿ ಉಳಿಸಿ (Save/Save As) ಕೊಳ್ಳಿ.
      ಈ ಮೇಲಿನ ಸಹಾಯ ನಿಮಗೆ ಸಹಾಯವಾಗದಿದ್ದರೆ ಮತ್ತೊಮ್ಮೆ ವಿವರವಾಗಿ ಕೇಳಿ.

      ನಿಮ್ಮ ಅಭಿಪ್ರಾಯವನ್ನು ತಿಳಿಸಿಕೊಟ್ಟದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು.

  4. ದಿನೇಶ್ ಮಾಚಾರ್‌, ಪುತ್ತೂರು

    ಮಾನ್ಯರೇ,
    ಅಭಿನಂದನೆಗಳು. ಕನ್ನಡಕ್ಕೊಂದು ಹೊಸ ‘ಪದ’ ನೀಡಿದ್ದೀರಿ. ಆ ಪದವನ್ನು ಬಳಸುತ್ತಿದ್ದೇನೆ. ತುಂಬಾ ಚೆನ್ನಾಗಿದೆ. ಪೂರ್ಣಚಂದ್ರ ತೇಜಸ್ವಿಯವರು ಕಂಡ ಕನಸೊಂದು ನನಸಾಗಿದೆ. ಐದಾರು ವರ್ಷ ಹಿಂದೆ ಇಂತಹುದೇ ತಂತ್ರಾಂಶವೊಂದನ್ನು ಹಂಪಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ತರುವ ಪ್ರಯತ್ನ ನಡೆದಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ನೀವು ಯಶಸ್ವಿಯಾಗಿದ್ದೀರಿ.
    ಈ ನಿಮ್ಮ ತಂತ್ರಾಂಶದಲ್ಲಿ ಇನ್ನೂ ಹೆಚ್ಚು Fontಗಳನ್ನು ಬಳಸಲು ಸಾಧ್ಯವೇ? ನುಡಿ fontಗಳನ್ನು ಪುರ್ಣ ಪ್ರಮಾಣದಲ್ಲಿ ಬಳಸುವ ಬಗೆ ಹೇಗೆ? ವಿದ್ಯಾಥರ್ಥಿಗಳಿಗೂ ಕೂಡ ಈ ತಂತ್ರಾಂಶ ಹೆಚ್ಚು ಪ್ರಯೋಜನಕಾರಿ ಮತ್ತು ಸುಲಭ.
    ಧನ್ಯವಾದಗಳು.
    ದಿನೇಶ್ ಮಾಚಾರ್‌
    ಶಿಕ್ಷಕರು, ಸ ಹಿ ಪ್ರಾ ಶಾಲೆ ಕಕ್ಕೂರು, ಪುತ್ತೂರು. ದ ಕ
    dineshmachar@gmail.com

    1. @pada.pro

      ತುಂಬಾ ಧನ್ಯವಾದಗಳು ಸರ್.

  5. ದಿನೇಶ್ ಮಾಚಾರ್‌, ಪುತ್ತೂರು

    ಮಾನ್ಯರೇ,
    ಅಭಿನಂದನೆಗಳು. ಕನ್ನಡಕ್ಕೊಂದು ಹೊಸ ‘ಪದ’ ನೀಡಿದ್ದೀರಿ. ಆ ಪದವನ್ನು ಬಳಸುತ್ತಿದ್ದೇನೆ. ತುಂಬಾ ಚೆನ್ನಾಗಿದೆ. ಪೂರ್ಣಚಂದ್ರ ತೇಜಸ್ವಿಯವರು ಕಂಡ ಕನಸೊಂದು ನನಸಾಗಿದೆ. ಐದಾರು ವರ್ಷ ಹಿಂದೆ ಇಂತಹುದೇ ತಂತ್ರಾಂಶವೊಂದನ್ನು ಹಂಪಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ತರುವ ಪ್ರಯತ್ನ ನಡೆದಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ನೀವು ಯಶಸ್ವಿಯಾಗಿದ್ದೀರಿ.
    ಈ ನಿಮ್ಮ ತಂತ್ರಾಂಶದಲ್ಲಿ ಇನ್ನೂ ಹೆಚ್ಚು Fontಗಳನ್ನು ಬಳಸಲು ಸಾಧ್ಯವೇ? ನುಡಿ fontಗಳನ್ನು ಪುರ್ಣ ಪ್ರಮಾಣದಲ್ಲಿ ಬಳಸುವ ಬಗೆ ಹೇಗೆ? ವಿದ್ಯಾರ್ಥಿಗಳಿಗೂ ಕೂಡ ಈ ತಂತ್ರಾಂಶ ಹೆಚ್ಚು ಪ್ರಯೋಜನಕಾರಿ ಮತ್ತು ಸುಲಭ.
    ಧನ್ಯವಾದಗಳು.
    ದಿನೇಶ್ ಮಾಚಾರ್‌
    ಶಿಕ್ಷಕರು, ಸ ಹಿ ಪ್ರಾ ಶಾಲೆ ಕಕ್ಕೂರು, ಪುತ್ತೂರು. ದ ಕ
    dineshmachar@gmail.com

  6. ಕಾರ್ತಿಕ್

    ಪದದಲ್ಲಿ “ಧ” ಟೈಪಿಸಲು dha ಪ್ರಯೋಗಿಸಿದರೆ ಅದು “ದಧ” ಆಗುತ್ತದೆ. ದಯವಿಟ್ಟು ಪರಿಹರಿಸಿ

    1. @pada.pro

      ಈ ಸಮಸ್ಯೆ ಇಲ್ಲಿ ಕಾಣುತ್ತಲೇ ಇಲ್ಲ. “ಧ” ಇದನ್ನು ಫೊನೆಟಿಕ್ ಲೇವೌಟ್‌ನಲ್ಲೇ dha ಎಂದು ಬರೆದದ್ದು. ನೋಡಿ ಸರಿಯಾಗಿಯೇ ಬಂದಿದೆ.
      ದಧ ಎಂದು ಬಂದಿಲ್ಲ.
      ನಿಮಗೆ ಯಾವಾಗಲೂ ಇದೇ ಸಮಸ್ಯೆ ಬರುತ್ತಿದೆಯೇ?
      ಯಾವ ಲೇವೌಟ್‌ ಬಳಸುತ್ತಿದ್ದೀರಿ? ಮತ್ತು ಈ ಸಮಸ್ಯೆಯು ಎಲ್ಲಿ (ಯಾವ ಅಪ್ಲಿಕೇಷನ್?) ಬರೆಯಲು ಪ್ರಯತ್ನಿಸಿದಾಗ ಬರುತ್ತದೆ?

      1. ಕಾರ್ತಿಕ್

        ನಾನು ಫೊನೆಟಿಕ್ ಲೌಟ್ ಬಳಸುತ್ತಿದ್ದೇನೆ. ಎಕ್ಸೆಲ್, ಫೇಸ್ಬುಕ್, ಇತ್ಯಾದಿಗಳಲ್ಲಿ ಈ ಥರ ಬರುತ್ತಿದೆ. ಮೈಕ್ರೋಸಾಪ್ಟ್ ವರ್ಡ್ ಗೆ ಯಾವ ಫಾಂಟ್ ಸೆಲೆಕ್ಟ್ ಮಾಡಬೇಕು, ದಯವಿಟ್ಟು ತಿಳಿಸಿ

        1. ವಿ.ರಾ.ಹೆ.

          ೧. ಹೌದು, ನನಗೂ ಕೂಡ ಇದೇ ಸಮಸ್ಯೆ ಇದೆ. ಮಹಾಪ್ರಾಣ ಟೈಪ್ ಮಾಡಲು ಹೋದರೆ ಮೊದಲಿಗೆ ಅಲ್ಪಪ್ರಾಣ ಬರುತ್ತದೆ ! 🙁 ನಾನೂ ಫೊನೆಟಿಕ್ ಬಳಸುತ್ತಿದ್ದೇನೆ. ಫೇಸ್ಬುಕ್ಕಲ್ಲಿ ಇದು ಅನುಭವವಾಗುತ್ತಿದೆ.

          ೨. ctrl F11 key ಒತ್ತಿದರೆ ಅದು F11 ಕೆಲಸವನ್ನೂ ಮಾಡುತ್ತಿದೆ ! (full screen window) . Gmailನಲ್ಲಿ ಈ ಸಮಸ್ಯೆ ಇರುವುದಿಲ್ಲ .

          1. ಲನಾ ಭಟ್ಟ

            ನನಗೂ ಪದ ಐ ಎಮ್ ಇ ಬಳಸುವಾಗ ಇದೇ ಸಮಸ್ಯೆ ಉಂಟಾಗುತ್ತಿದೆ. ಉದಾಹರಣೆಗೆ ಈಗ ನಾನು ಫೈರ್ ಫಾಕ್ಸ್ ಬ್ರೌಸರ್ ನಲ್ಲಿ.

            phairphaks ಎಂದು ಬೆರಳಚ್ಚು ಮಾಡಿದರೆ ಪಫೈರ್ಪಫಾಕ್ಸ್ ಎಂದು ಮೂಡುತ್ತಿದೆ. ಖ್ರೋಮ್ ನಲ್ಲೂ ಈ ಸಮಸ್ಯೆ ಇದೆ.

            ನೋಟ್ ಪ್ಯಾಡ್ ನಲ್ಲಿ ಬೆರಳಚ್ಚು ಮಾಡುವಾಗ ಈ ಸಮಸ್ಯೆ ಇಲ್ಲ…

  7. ಶ್ರೀನಿವಾಸ ಮೂರ್ತಿ ಬಿ.ಆರ್‌

    ಆತ್ಮೀಯ ಲೋಹಿತ್‌ರವರೇ.
    ಪದ ತಂತ್ರಜ್ಞಾನದಲ್ಲಿ ಯಾವುದೇ ಅಪ್‌ಡೇಟ್‌ಗಳನ್ನು ಮಾಡಿದ್ದಲ್ಲಿ ದಯವಿಟ್ಟು ನಮಗೂ ತಿಳಿಸಿ. ನೀವು ಎಲ್ಲಾ ವಿಧದ ಕೀಲಿಮಣೆಯನ್ನು ನೀಡಿದ್ದೀರಿ ಆದರೆ ನಾನು ಬಹಳ ಹಿಂದಿನಿಂದ ಬರಹ brhkbd ಕೀಲಿಮಣೆ ಬಳಸುತ್ತಿದ್ದರಿಂದ ನುಡಿ ಕೆ.ಪಿ.ರಾವ್‌)999999)0000)))1212222 ಕೀಲಿಮಣೆಯನ್ನು ಬಳಸುವುದು ಕಷ್ಟವಾಗುತ್ತಿದೆ ಹಾಗೂ ತುಂಬಾ ತಪ್ಪುಗಳು ಬರುತ್ತಿವೆ. ಆದ್ದರಿಂದ ಇದಕ್ಕೇನಾದರೂ ಪರಿಹಾರ ಇದೆಯೇ?? ಬರಹ brhkbd ಕೀಲಿಮಣೆ ಅಥವ ಪರ್ಯಾಯ ಪರಿಹಾರ ನಿಮ್ಮಲ್ಲಿ ಸಿಗುವುದೇ? ಸಿಕ್ಕಲ್ಲಿ ತುಂಬಾ ಉಪಕಾರವಾಗುವುದು. ನಿಮ್ಮ ಪ್ರತ್ಯುತ್ತರದ ನಿರೀಕ್ಷೆಯಲ್ಲಿ…..

    ಇಂತಿ

    ಶ್ರೀನಿವಾಸ ಮೂರ್ತಿ ಬಿ.ಆರ್‌.
    srinivasabdg@gmail.com

    1. @pada.pro

      ಶ್ರೀನಿವಾಸ್ ಅವರಿಗೆ ನಮಸ್ತೆ,

      ನೀವು ಏನು ಹೇಳಲು ಹೋಗಿ ಮತ್ತೇನನ್ನೋ ಹೇಳುತ್ತಿರುವ ಹಾಗೆ ಅನ್ನಿಸುತ್ತಿದೆ.
      ಮೊದಲು ಎಲ್ಲಾ ಕೀಲಿಮಣೆಯನ್ನೂ ಕೊಟ್ಟೀದ್ದೀರಿ ಎಂದಿರಿ. ನಂತರ ನುಡಿ ಕೀಲಿಮಣೆಯಲ್ಲಿ ತಪ್ಪಿವೆ ಎನ್ನುತ್ತೀರಿ.
      ಮದ್ಯೆ ಒಮ್ಮೆ brhkbd ಇಲ್ಲ ಎಂದಿದ್ದೀರಿ.

      ಪದದಲ್ಲಿ ಈಗಾಗಲೇ ಮೂರು ಕಳಿಮಣೆ ವಿನ್ಯಾಸಗಳಿವೆ.
      ನುಡಿಯಲ್ಲಿ ಕೆ.ಪಿ.ರಾವ್ ಲೇವೌಟ್ನಲ್ಲಿ ಏನು ತಪ್ಪಿದೆ ಎಂದು ಒಂದು ಉದಾಹರಣೆ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು.
      ನಿಮಗೆ ಕೀಲಿಮಣೆ ಸಹಾಯವನ್ನೂ ಸಹ ನೀಡಲಾಗಿದೆ.
      Pada Menu -> Help -> Keyboard Layout ಇಲ್ಲಿ ಒಮ್ಮೆ ಪರೀಕ್ಷಿಸಿ.

      ನಿಮಗೆ ಯಾವುದೇ ಹೆಚ್ಚಿನ ಸಹಾಯ ಬೇಕಿದ್ದರೆ ಸಂಕೋಚವಿಲ್ಲದೆ ಕೇಳಿ.

      ಧನ್ಯವಾದಗಳು.

  8. ಗುರುರಾಜತಂತ್ರಿ

    ಕನ್ನಡಕ್ಕೆ ಒಂದು ಅತ್ಯುತ್ತಮ ತಂತ್ರಾಂಶವನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು. ಪದದ ಲಿನಕ್ಸ್ ಆವೃತ್ತಿ ಯಾವಾಗ ಬಿಡುಗಡೆ ಮಾಡುತ್ತೀರಿ? ಅದಕ್ಕಾಗಿ ಕಾಯುತ್ತಿದ್ದೇನೆ. ನಾನು ಮುಖ್ಯವಾಗಿ ಬಳಸುವುದು ಲಿನಕ್ಸ್ ಮಿಂಟ್ ಆಪರೇಟಿಂಗ್ ಸಿಸ್ಟಮ್ ಅನ್ನು. ಅದರಲ್ಲಿ ibus ಅಥವಾ scim ಬಳಸಿ ಕನ್ನಡವನ್ನು ಟೈಪಿಸಬಹುದು. ಆದರೆ ಕೆಲವೊಂದು ಅಕ್ಷರಗಳಲ್ಲಿ ಸಮಸ್ಯೆಯಿದೆ. ಪದದ ಲಿನಕ್ಸ್ ಆವೃತ್ತಿ ಬಿಡುಗಡೆ ಮಾಡಿದರೆ ನನ್ನಂತಹಾ ಅನೇಕರಿಗೆ ಉಪಕಾರವಾಗುತ್ತಿತ್ತು

    ಧನ್ಯವಾದಗಳು.

  9. ಗುರುರಾಜತಂತ್ರಿ

    ಕನ್ನಡಕ್ಕೊಂದು ಅತ್ಯುತ್ತಮ ತಂತ್ರಾಂಶವನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು. ಪದದ ಲಿನಕ್ಸ್ ಆವೃತ್ತಿಯನ್ನು ಯಾವಾಗ ಬಿಡುಗಡೆ ಮಾಡುತ್ತೀರಿ? ಅದಕ್ಕಾಗಿ ಕಾಯುತ್ತಿದ್ದೇನೆ.
    ಧನ್ಯವಾದಗಳು

  10. ಗುರುರಾಜತಂತ್ರಿ

    ಕನ್ನಡಕ್ಕೊಂದು ಅತ್ಯುತ್ತಮ ತಂತ್ರಾಂಶವನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು. ಪದದ ಲಿನಕ್ಸ್ ಆವೃತ್ತಿಯನ್ನು ಯಾವಾಗ ಬಿಡುಗಡೆ ಮಾಡುತ್ತೀರಿ? ಅದಕ್ಕಾಗಿ ಕಾಯುತ್ತಿದ್ದೇನೆ.
    ಧನ್ಯವಾದಗಳು

    1. @pada.pro

      ಬರುತ್ತೇರೀ ಗುರು, ಲೀನಕ್ಸ್‌ಗೂ ರೆಡಿ ಆಗ್ತಿದೆ. ಯಾವಾಗ ಬೇಕಾದರೂ ರಿಲೀಸ್ ಆಗಬಹುದು.
      ಧನ್ಯವಾದಗಳು

  11. Sheshadri

    ee tantraamshavannu IPAD nalli upayogisabahude? dayavittu tilisi.

    1. @pada.pro

      ಇಲ್ಲ ಕಣ್ರೀ

  12. naveen

    ನಮಸ್ಕಾರೀ ಸರ್ರಾ….ಇದು ಮಸ್ತ ಐತಿ… ಇದಕ್ಕ ನನ್ನುವು ಇನ್ನು ಸ್ವಲ್ಪ ಇನ್ ಪುಟ್ಸ ಅದಾವ್… ಮೆಲ್ ನ್ಯಾಗ್ ಕಲಸ್ಠಿನಿ…. ಥ್ಯಾಕ್ಯು ಪಾ….ನಮ್ಡು ಕನ್ನಡಾನ…. ನಿಮ್ಮ ಕೀಲೀಮನಿ ಟೆಸ್ಟ್ ಮಾಡ್ಲಿಕತ್ತಿನಿ….

  13. Mandara

    Namaskara,

  14. Mandara

    Today i got to know about this software while browsing. I have just downloaded it in office. cant wait to to start using it .
    Thanks for a good software. 🙂
    BTW i tried commenting in kannada but i m getting only english fonts. 🙁

  15. jayashree

    Hello, Sir,

    pada tatntramshavannu hege balsuvudu heli? mattu adannu hege down load madvuvdu hege heli
    download madruve adu download agtilla ADAKKE NUD IOR BARAHA tanatranmsha balasabeka?sir

    davavittu heli

    1. @pada.pro

      ಹಾಗೇನೂ ಇಲ್ಲ ಕಣ್ರೀ…

      ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಪದ ಡೌನ್‌ಲೋಡ್ ಆಗುತ್ತೆ.
      http://www.pada.pro/download/PadaSoftware-Kannada-Installer-4.1.exe
      ಡೌನ್‌ಲೋಡ್ ಆದ್ಮೇಲೆ, ಇನ್ಸ್ಟಾಲ್ ಮಾಡ್ಕೊಳ್ಳಿ.

      ಇಲ್ಲಿರುವ ಮಾಹಿತಿಯನ್ನೂ ಒಮ್ಮೆ ಗಮನಿಸಿ ಬಹುದು
      http://www.pada.pro/%e0%b2%aa%e0%b2%a6-ime-%e0%b2%ac%e0%b2%b3%e0%b2%b8%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/

      ಧನ್ಯವಾದಗಳು

  16. D.H.M.Veerashekhara Swamy

    ಕನ್ನಡಕ್ಕೊಂದು ಅತ್ಯುತ್ತಮ ತಂತ್ರಾಂಶವನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು. ನಾನು ಸುಲಭವಾಗಿ ಕನ್ನಡದಲ್ಲಿ ಬರೆಯುತ್ತಿದ್ದನೆ. ತುಂಭಾ ದನ್ಯವಾದಾಗಳು

    1. @pada.pro

      ಮೆಚ್ಚಿಕೊಂಡದ್ದಕ್ಕೆ ಬಹಳ ಧನ್ಯವಾದಗಳು.
      ಜೈ ಕನ್ನಡ

  17. ಕೃಷ್ಣಮೂರ್ತಿ ಡಿ.ಎಚ್.

    ಧನ್ಯವಾದಗಳು, ಕನ್ನಡಕ್ಕೊಂದು ಒಳ್ಳೆಯ ತಂತ್ರಾಂಶವನ್ನು ನೀಡಿದ್ದೀರಿ. ಕನ್ನಡ ಯೂನಿಕೋಡ್ ಅಂತರ್ಜಾಲ ತಾಣವನ್ನು ನಿರ್ಮಿಸುತ್ತಿರುವ ನನಗೆ ಇದರಿಂದ ತುಂಬಾ ಅನುಕೂಲವಾಗಿದೆ. ಸರ್ಕಾರಿ ನೌಕರನಾಗಿರುವ ನಾನು ನಿಮ್ಮ “ಪದ” ತಂತ್ರಾಂಶವನ್ನು ಸರ್ಕಾರಿ ಕಛೇರಿಗಳಲ್ಲಿ ಬಳಸಲು ಕುರಿತು ನಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇನೆ. ನನಗೆ “ರ್ಯಾಂಬೋ” ಈ ಪದವನ್ನು “ರ” ಅಕ್ಷರದ ಕೆಳಗೆ “ಯ” ಕಾರವನ್ನು ಬಳಸಲು ತಾವು ಮಾಡಿದ್ದೀರೆಂದು ಶ್ರೀ ನರಸಿಂಹಮೂರ್ತಿಗಳು, ಕನ್ನಡ ಗಣಕ ಪರಿಷತ್ತಿನಿಂದ ತಿಳಿದೆ. ದಯಮಾಡಿ ಇದು ಹೇಗೆಂದು ತಿಳಿಸಿ. ಈಗಾಗಲೇ ಇದನ್ನು “ನುಡಿ” ತಂತ್ರಾಂಶದಲ್ಲಿ ಮಾಡಿರುವುದನ್ನು ಶ್ರೀಯುತರು ತಿಳಿಸಿರುತ್ತಾರೆ.

    1. @pada.pro

      ಧನ್ಯವಾದಗಳು ಕೃಷ್ಣಮೂರ್ತಿಯವರಿಗೆ,

      ನೀವು ಪದದಲ್ಲಿ ಈಗಾಗಲೇ ನೀಡಿರುವ “Help” —>> “Keyboard Examples” ಮೆನುವಿನಲ್ಲಿ ಒಮ್ಮೆ ಇಣುಕಿದರೆ,
      ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.

      ಅಥವಾ ಇನ್ನೂ ಗೊಂದಲಗಳಿದ್ದರೆ ದಯವಿಟ್ಟು ಪುನಃ ಸಂಪರ್ಕಿಸಿ.

  18. srinivas

    dear sir,

    how to use in ms offie,page maker & corel draw

    1. hasaraswathi

      please i want to knowhow tounderstand read &writein computer

      1. @pada.pro

        ಅರ್ಥವಾಗಲಲಿಲ್ಲ, ದಯವಿಟ್ಟು ಇನ್ನೊಮ್ಮೆ ಸರಳ ಭಾಷೆಯಲ್ಲಿ ನಿಮಗೆ ಏನು ಬೇಕೆಂದು ವಿವರಿಸಿ

  19. hasaraswathi

    howdo iknowread&writeincomputer

  20. ಮಂಜುನಾಥ

    ತುಂಬಾ ಉಪಯೊಗವಾಗುತದೆ

    1. @pada.pro

      ಧನ್ಯವಾದಗಳು

  21. gurunath boragi

    ಪದ ತಂತ್ರಾಂಶದಿಂದ ಬಳಸಿದ ಅಕ್ಷರಗಳನ್ನು ಪುಸ್ತಕ ಮುದ್ರಣಕ್ಕೂ ಯಥಾವತ್ ಬಳಸಲು ಸಾಧ್ಯವೇ? ನಾನೀಗ
    ಗೂಗಲ್ ಅನುವಾದ ಬಳಸುತ್ತಿದ್ದೇನೆ.ಇದು ಬೇರೆ ಲಿಪಿಗೆ ಕನ್ವರ್ಟ್ ಆಗಲಾರದು. ಈ ಕೊರತೆ ‘ಪದ’ ನೀಗಿಸುವುದೇ?

    1. @pada.pro

      ಹೌದು, ಸಾದ್ಯ

      1. Vivek

        ಅದು ಹೇಗೆ ಎಂದು ತಿಳಿಸಿ ಕೊಡುವಿರಾ???

  22. ಶಂಕರ್

    ನಮಸ್ತೆ,

    ಪದ ತಂತ್ರಾಂಶವನ್ನು ಲಿನಕ್ಸಿನಲ್ಲಿ ಬಳಸಿ ನೋಡಿದ್ದೆ, ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಈಗ ವಿಂಡೋಸ್‌ ೭ ಕ್ಕಾಗಿ ಪ್ರಯತ್ನಿಸುತ್ತಿರುವೆ. Viraal ಅನ್ನೋ ಸಂಪಾದಕದಲ್ಲಿ ಕನ್ನಡದ ಅಕ್ಷರಗಳನ್ನು ಕೀಲಿಸಬೇಕಿದೆ. PadaIME ಸಕ್ರಿಯವಾಗಿದ್ದರೂ ಸಹ Virtaal ನಲ್ಲಿನ ಟೆಕ್ಸ್ಟ್ ಬಾಕ್ಸಿನಲ್ಲಿ ಖಾಲಿ ಜಾಗಗಳು (ಬ್ಲಾಂಕ್‌ ಸ್ಪೇಸಸ್) ಬರ್ತಾ ಇದೆ.

    ಇದನ್ನು ಸರಿಪಡಿಸಲು ಉಪಾಯವೇನು?

    ನನ್ನಲ್ಲಿ ತುಂಗಾ, ಗುಬ್ಬು ಫಾಂಟುಗಳಿವೆ.

    ವಿಂಡೋಸ್ ವಿಷಯದಲ್ಲಿ ನಾನು ಸ್ವಲ್ಪ ಅಜ್ಞಾನಿ.

    ಶಂಕರ್

  23. Devi Prasad. M

    I was using (PadaSoftware-Indic-Installer-4.1) on my previous laptop with Windows 7 but the Windows 8 installer on my new laptop is not accepting it. Can someone suggest me an alternative version?

  24. ಮುಳ್ಳೇರಿಯಾ

    ಸರ್, ನನ್ನದು ವಿಂ. ಎಕ್ಸ್.ಪಿ. ನಾನು ಪದ ಪ್ಯಾಡಿನಲ್ಲಿ ನುಡಿ ಯುನಿಕೋಡ್ ಬಳಸಿ ತುಂಗ ಫಾಂಟಿನಲ್ಲಿ ಟೈಪ್ ಮಾಡಿದೆ. ಕನ್ನಡ ಅಕ್ಷರಗಳು ಮೂಡಿ ಬಂದು ಲೇಖನ ಸಿದ್ಧವಾಯಿತು. ಅದನ್ನು ಸೇವ್ ಅಸ್ ಆರ್. ಟಿ.ಎಫ್. ವರ್ಡ್ ನಲ್ಲಿ ಸೇವ್ ಮಾಡಿದೆ. ಆದರೆ ಸೇವ್ ಆದ ಬಳಿಕ ಓಪನ್ ಆಗ್ತಿಲ್ಲ. .ಡಾಕ್ಸ್ ಗೆ ಬದಲಾಯಿಸಿದೆ. ಫಾಂಟ್ ಏರಿಯಲ್ ಯುನಿಕೋಡ್ ಮಾಡಿದೆ . ಓಪನ್ ಆಗ್ತಿಲ್ಲ. ನಾನು ಮಾಡಿದ ತಪ್ಪೇನು? ಏನು ಮಾಡಬೇಕಿತ್ತು? ನಾನು ಬರೆದುದನ್ನು ಡಿ-ಕೋಡ್ ಮಾಡಲು ಸಾಧ್ಯವೇ? ಇಲ್ಲಿ ಅಂಟಿಸಿದ್ದೇನೆ.
    ಪ್ರಧಾನಮಂತ್ರಿಯವರ ದೂರು ಪರಿಹಾರ ವಿಭಾಗಕ್ಕೆ ಕೇರಳದ ಕಾಸರಗೋಡಿನಲ್ಲಿರುವ ಭಾಕಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳ ಪೋಕಕರ ಪರವಾಗಿ ಮನವಿ
    ೧. ಕೇರಳ ಸರಕಾರವು ಕಾಸರಗೋಡು ತಾಲೂಕನ್ನು ಕನ್ನಡ ಭಾಕಾ ಅಲ್ಪಸಂಖ್ಯಾತ ಪ್ರದೇಶವೆಂದು ಘೋಕಿಸಿದೆ. ಸಂವಿಧಾನದ ೩೫೦ ಎ ವಿಧಿ ಪ್ರಕಾರ ಭಾಕಾ ಅಲ್ಪಸಂಖ್ಯಾತರಿಗೆ ಅವರ ಮಾತೃಭಾಕಾ ಮಾಧ್ಯಮದಲ್ಲಿ ಶಿಕ್ಕಣ ನೀಡಬೇಕಾಗಿದೆ. ಆ ಪ್ರಕಾರ ಇಲ್ಲಿ ಕನ್ನಡ ಮತ್ತು ತಮಿಳು ಮಾಧ್ಯಮಗಳ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಕಾರ್ಯಾಚರಿಸುತ್ತಿವೆ.
    ೨. ಆದರೆ ಇಲ್ಲಿನ ಸರಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳಲ್ಲಿ ಕೇರಳ ಲೋಕಸೇವಾ ಆಯೋಗ, ಕೇರಳ ಸರಕಾರದ ಶಿಕ್ಕಣ ಇಲಾಖೆ ಹಾಗೂ ಶಾಲಾ ವ್ಯವಸ್ಥಾಪಕರು ಕನ್ನಡ ಭಾಕೆ ತಿಳಿಯದ ಆಧ್ಯಾಪಕರನ್ನು ನೇಮಿಸುತ್ತಿದ್ದಾರೆ. ಈ ಶಿಕ್ಕಕರು ಮಲಯಾಳದಲ್ಲಿ ಪಾಠಮಾಡುವುದರಿಂದ ಕನ್ನಡ ಭಾಕಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪಾಠಮನವರಿಕೆಯಾಗದೆ ಅವರ ಶೈಕ್ಕಣಿಕ ಭವಿಕ್ಯವನ್ನು ಕೆಟ್ಟದಾಗಿ ಬಾಧಿಸುತ್ತಿದೆ. ಮಾತೃಭಾಕೆಯಲ್ಲಿ ಶಿಕ್ಕಣ ಪಡೆಯುವ ವಿದ್ಯಾರ್ಥಿಗಳ ಮೂಲಭುತ ಹಕ್ಕಿಗೆ ಧಕ್ಕೆಯಾಗುತ್ತದೆ. ಇಂಗ್ಲೀಕ್, ಹಿಂದೀ, ಸಂಸ್ಕೃತ ಮೊದಲಾದ ವಿಕಯಗಳನ್ನು ಆಯಾ ಭಾಕೆಗಳಲ್ಲಿ ಬೋಧಿಸುವುದು ಸರಕಾರದ ಶಿಕ್ಕಣನೀತಿಯಾದುದರಿಂದ ಮಾಧ್ಯಮದ ಸಮಸ್ಯೆ ಉಧ್ಭವಿಸದು ಎಂದು ಸರಕಾರ ಹೇಳಿದರೂ ಶಿಕ್ಕಕರು ಈ ಭಾಕಾ ವಿಕಯಗಳನ್ನು ಅದೇ ಭಾಕೆಗಳ ಮೂಲಕ ಕಲಿಸದೆ ಮಲಯಾಳದಲ್ಲಿ ಕಲಿಸುವುದನ್ನು ತಡೆಯುವುದಿಲ್ಲ. ಇದರಿಂದ ಮಲಯಾಳಿ ವಿದ್ಯಾರ್ಥಿಗಳಿಗೆ ಅವರ ಮಾತೃಭಾಕೆಯ ಮೂಲಕ ಶಿಕ್ಕಣ ಲಭಿಸಿದರೆ ಭಾಕಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಬಾಕೆಯ ಮೂಲಕ ಕಲಿಸುವುದರಿಂದ ಶಿಕ್ಕಣದಲ್ಲಿ ಹಿಂದುಳಿಯುತ್ತಿದ್ದಾರೆ. ಈಚೆಗೆ ಗಣಿತ, ಸಮಾಜ ವಿಜ್ಞಾನ, ಜೀವ ವಿಜ್ಞಾನ,ಭೌತ-ರಸಾಯನಿಕ ವಿಜ್ಞಾನದಂತಹ ಕಠಿಣ ವಿಕಯಗಳಿಗೂ ಕನ್ನಡಭಾರದ ಅಧ್ಯಾಪಕರನ್ನು ನೇಮಿಸಲಾಗುತ್ತದೆ. ಇದರಿಂದ ನಮ್ಮ ಕನ್ನಡ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಇದಕ್ಕೆ ಕಾರಣವೆಂದರೆ ಕೇವಲ ಸಂದರ್ಶನದ ಮೂಲಕ ಶಿಕ್ಕಕ ಅಭ್ಯರ್ಥಿಗಳ ಕನ್ನಡ ಜ್ಞಾನವನ್ನು ಪರೀಕ್ಕಿಸುವ ಲೋಕಸೇವಾ ಆಯೋಗದ ವಿಧಾನದಿಂದ ಭ್ರಕ್ಟಾಚಾರ ನಡೆದು ಕನ್ನಡಬಾರದವರೂ ಅಯ್ಕೆಯಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಪತ್ರಿಕಾವರದಿಗಳನ್ನು ಲಗತ್ತಿಸಲಾಗಿದೆ.
    ೩. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಕನ್ನಡ ಹಾಗೂ ತಮಿಳು ಅಲ್ಪಸಂಖ್ಯಾತ ಭಾಕಾ ಮಾಧ್ಯಮ ಶಿಕ್ಕಕರ ಮೂಲ ಅರ್ಹತೆಯಲ್ಲಿ ಇತರ ಅಪೇಕ್ಕಿತ ಅರ್ಹತೆಗಳೊಂದಿಗೆ (ಪದವಿ, ಶಿಕ್ಕಣ ಪದವಿ ಇತ್ಯಾದಿ) ‘ ಕನಿಕ್ಠಹತ್ತನೇ ತರಗತಿವರೆಗೆ ಆಯಾ ಭಾಕೆಗಳನ್ನು (ಕನ್ನಡ ಅಥವಾ ತಮಿಳು) ಕಲಿತಿರಬೇಕು” ಎಂದು ನಿಯಮ ರೂಪಿಸಬೇಕಾಗಿದೆ. ಕನ್ನಡ ಬಾರದ ಶಿಕ್ಕಕರನ್ನು ನೇಮಿಸಿದ ಹಿಂದಿನ ಪ್ರಕರಣವೊಂದರಲ್ಲಿ ಕೇರಳ ಮಾನವ ಹಕ್ಕುಗಳ ಆಯೋಗ ನೇಮಿಸಿದ ತನಿಖಾ ಸಮಿತಿಯ ಸೂಚನೆ ಮೇರೆಗೆ ಡಿ.ಪಿ.ಐ (ಕೇರಳ ಶಿಕ್ಕಣ ನಿರ್ದೇಶಕರು) ಕೂಡ ಈ ಶಿಫಾರಸ್ಸನ್ನು ಮಾಡಿದ್ದರೂ ಇನ್ನೂ ಕೇರಳ ಸರಕಾರ ಇದನ್ನು ಅನುಕ್ಠಾನಗೊಳಿಸಿಲ್ಲ. ಕೇರಳ ಮುಖ್ಯಮಂತ್ರಿಯವರ ಜನಸಂಪರ್ಕ ಕಾರ್ಯಕ್ರಮದಲ್ಲಿ ಈ ಭರವಸೆ ನೀಡಿದ್ದರೂ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. (ವಿವರ ಲಗತ್ತಿಸಿದೆ)
    ೪, ಇದಕ್ಕೆ ಸಂಬಂಧಿಸಿದ ಕಡತ 1661/J3/13 Gen.edu ಈಗಾಗಲೇ ಸರಕಾರದ ಶಿಕ್ಕಣ ಇಲಾಖೆಯಲ್ಲಿದ್ದು ‘ಕನ್ನಡ ಹಾಗೂ ತಮಿಳು ಅಲ್ಪಸಂಖ್ಯಾತ ಭಾಕಾ ಮಾಧ್ಯಮ ಶಿಕ್ಕಕರ ಮೂಲ ಅರ್ಹತೆಯಲ್ಲಿ ಇತರ ಅಪೇಕ್ಕಿತ ಅರ್ಹತೆಗಳೊಂದಿಗೆ (ಪದವಿ, ಶಿಕ್ಕಣ ಪದವಿ ಇತ್ಯಾದಿ) ‘ ಕನಿಕ್ಠಹತ್ತನೇ ತರಗತಿವರೆಗೆ ಆಯಾ ಭಾಕೆಗಳನ್ನು (ಕನ್ನಡ ಅಥವಾ ತಮಿಳು) ಕಲಿತಿರಬೇಕು” ಎಂದು ನಿಯಮ ಕೂಡಲೇ ಅನುಕ್ಠಾನಗೊಳಿಸಬೇಕೆಂದು ಬೇಡಿಕೊಳ್ಳುತ್ತೇವೆ.

    1. @pada.pro

      ಪದದಲ್ಲಿ ENCODING ಅಂತ ಮೆನು ಇದೆ ನೋಡಿ.
      ನೀವು ಅಲ್ಲಿ ANSI ಎಂದು ಸೆಲೆಕ್ಟ್ ಮಾಡಕೊಂಡಿದ್ದರೆ ಈ ರೀತಿಯಾ ತಪ್ಪು ಆಗಿರುತ್ತೆ.
      ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರ ಮಾಡಲಾಗುವುದು

  25. ಮುಳ್ಳೇರಿಯಾ

    ನನ್ನ ಕಳೆದ ಕಮೆಂಟಿನ ಮುಂದುವರಿಕೆ: ಎನ್ ಕೋಡಿಂಗ್ ಮಾಡಿದೆ. ಸಾಧ್ಯವಾಯಿತು. ಓದಲಿಕ್ಕಾಗದ ವರ್ಡ್ ಫೈಲನ್ನು ಡೆಸ್ಕ್ ಟಾಪಿಗೆ ಅಂಟಿಸಿ ಅದನ್ನು ಡ್ರಾಗ್ ಮಾಡಿ ಪದ ಐಕಾನ್ ಮೇಲೆ ಕೂರಿಸಿದಾಗ ಓಪನ್ ಆಯ್ತು. ಅದನ್ನು ಸೇವ್ ಆಸ್ ಮಾಡದೆ ಕೇವಲ ಸೇವ್ ಮಾಡಿ ಓಪನ್ ಮಾಡಿದರೆ ಹೇಗೆ ಓಪನ್ ಮಾಡಬೇಕು ಅಂತ ಕೇಳುತ್ತದೆ. ವರ್ಡ್ ನಲ್ಲಿ ಎನ್ ಕೋಡಿಂಗ್ ಡಿಫಾಲ್ಟ್ ಯು ಟಿ ಎಫ್ 8 ರಲ್ಲಿ ಓಪನ್ ಆಗ್ತದೆ. ಅದನ್ನು ಬೇರೊಂದು ಕಡೆ ನೇರವಾಗಿ ಸೇವ್ ಆಸ್ ಮಾಡೋಕೆ ಆಗಲ್ಲ. ಅದನ್ನು ಕಾಪಿ ಮಾಡಿ ಹೊಸ ವರ್ಡ್ ಫೈಲ್ ಓಪನ್ ಮಾಡಿ ಅಂಟಿಸಿ ಸೇವ್ ಮಾಡಬೇಕು. ಒಟ್ಟು ನನ್ನ ಪದ ಪ್ಯಾಡಿನಲ್ಲಿ ಟೈಪಿಂಗ್ ಹಾಗೂ ನೇರವಾಗಿ ಸೇವ್ ಆಸ್ ಮಾಡುವ ವಿಧಾನದಲ್ಲಿ ಏನೋ ತಪ್ಪಿರಬೇಕು. ಅಥವಾ ಪದಪ್ಯಾಡಿನಲ್ಲಿ ಬರೆದುದನ್ನು ನೇರವಾಗಿ ಸೇವ್ ಆಸ‍್ ಮಾಡೋಕೆ ಆಗಲ್ವಾ? ತಿಳಿಸಿ.

    1. @pada.pro

      ಪದದಲ್ಲಿ ENCODING ಯಾವಾಗಲೂ ANSI ಎಂದು ಇಡಲೇ ಬೇಡಿ. ಆಗ ಈ ಸಮಸ್ತೆ ಬರಲ್ಲ

  26. Vivek

    Kindly help on How to Old Kannada scripts or words to English with diacritics.

  27. Raphael

    I wish to create off line dictionary for konkani (using Kannada words) language. kindly suggest me, is it possible to do

  28. ಡಾ. ಎಸ್.ಗುರುರಾಜ

    ಗಣಕಯಂತ್ರಗಳಲ್ಲಿ ಕನ್ನಡ ಬರೆಯಲು ತಾವು ಸಿದ್ಧ ಪಡಿಸಿದ ʼಪದʼ ತಂತ್ರಾಂಶ ಅದ್ಭುತ. ವಿಶೇಷವಾಗಿ ಕನ್ನಡದ ಬಗ್ಗೆ ತಮಗಿರುವ ಪ್ರೀತಿಗೆ ತಮ್ಮನ್ನು ಅಭಿನಂದಿಸಲೇಬೇಕು.
    ತಮ್ಮಲ್ಲಿ ಒಂದು ಮಾಹಿತಿ ಕೇಳಬಯಸುತ್ತೇನೆ.
    ನನಗೆ pagemaker ಹಾಗೂ Photoshop ಗಳಲ್ಲಿ ʼಪದʼದ ಮೂಲಕ ಕನ್ನಡ ಬರೆಯಬಹುದಾ?
    ಹಾಗೆಯೇ ತಾವು ಕನ್ನಡದಲ್ಲಿ ವಿಶೇಷ ಫಾಂಟ್‌ಗಳನ್ನು ಒದಗಿಸಿದರೆ ತುಂಬಾ ಒಳ್ಳೆಯದು.

    1. @pada.pro

      ಮಾಡಬಹುದು ಸಾರ್.
      ಪದ ಹೊಸ ವರ್ಷನ್ 5.x.3 download ಮಾಡಿಕೊಳ್ಳಿ.
      ಪದIME ಬರುತ್ತೆ, ಅದರಿಂದ ANSI ಅಥವ ಯೂನಿಕೋಡ್ ಯಾವುರಲ್ಲಾದರೂ ಕನ್ನಡ ಬರೆಯಬಹುದು.

Leave a Reply to ಶ್ರೀನಿವಾಸ ಮೂರ್ತಿ ಬಿ.ಆರ್‌ Cancel reply

Your email address will not be published. Required fields are marked *