«

»

ಒಂದು ಮೆಟ್ಟಿಲು

ನಮಸ್ತೆ,

ಪದ ತಂತ್ರಾಂಶ ಆವೃತ್ತಿ 4.0 ಬಿಡುಗಡೆ ಮಾಡಿ ಇಂದಿಗೆ ಆರನೇ ದಿನ. ಪದ ತಂತ್ರಾಂಶವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದ ಕನ್ನಡಿಗರಿಗೆ ಚೆನ್ನಾಗಿ ಗೊತ್ತು ಅದೇನೆಂದರೆ ಆವೃತ್ತಿ 4.0 ಪದ ತಂತ್ರಾಂಶದ ಇಲ್ಲಿವರೆಗಿನ ಅತ್ಯುತ್ತಮ ಅವೃತ್ತಿ ಎಂದು.

ಪದ IME, ಪದಕೋಶ ಹಾಗೂ ಪದ ಎಡಿಟರ್ ಎಲ್ಲವನ್ನೂ ಒಟ್ಟು ಸೇರಿಸಿ, ಪದ-ತಂತ್ರಾಂಶ-ಕನ್ನಡ-4.0 ಯನ್ನು ಬಿಡುಗಡೆಮಾಡಲಾಗಿತ್ತು. ಕೆಲವರಿಗೆ ಈಗಾಗಲೇ install ಮಾಡಿಕೊಂಡಿದ್ದ Anti-Virus Software ನ ಸಮಸ್ಯೆಯಿಂದಾಗಿ 3rd party ತಂತ್ರಾಂಶಗಳನ್ನು install ಮಾಡಲು ಬಿಡುತ್ತಿರಲಿಲ್ಲ. ಮತ್ತೆ ಕೆಲವರು ಪದ ತಂತ್ರಾಂಶವನ್ನು ಒಮ್ಮೆ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಇತರ ಬೇರೆ ಗಣಕಗಳಲ್ಲಿ ಬಳಸಲು ಪ್ರಯತ್ನಿಸುವವರಿರುವರು. ಇಲ್ಲಿ ಪದ ತಂತ್ರಾಂಶವನ್ನು install ಮಾಡಿಕೊಳ್ಳಲು ಆಗದೇ ಇರುವಂತಹ ಸಂದರ್ಭದಲ್ಲಿಯೂ ಪದ-ತಂತ್ರಾಂಶವನ್ನು ಉಪಯೋಗಿಸಲು ಅನುವು ಮಾಡಿಕೊಡುವ ಸಲುವಾಗ portable ಅಥವಾ zipped ಆವೃತ್ತಿಯನ್ನೂ ಬಿಡುಗಡೆ ಮಾಡಬೇಕಾಗಿ ಬಂತು.

ಗಣಕದಲ್ಲಿ ಹೊಸದಾಗಿ ಕನ್ನಡ ಅಥವಾ ಇತರೆ ಭಾರತೀಯ ಭಾಷೆಗಳನ್ನು ಬರೆಯಲು ಆರಂಬಿಸುವವರಿಗೆ ಹೆಚ್ಚು ಅನುಕಾಲವಾಗಲಿ ಎಂದು ಕೀಲಿಮಣೆ-ವಿನ್ಯಾಸದ ಸಹಾಯವನ್ನು ಸೇರಿಸಲಾಗಿದೆ. ನಿಮ್ಮದೇ ಒಂದು ದೊಡ್ಡ “ಪದಪಟ್ಟಿ” (word list) ಇದ್ದು ಅದನ್ನು ಪದ ತಂತ್ರಾಂಶದ ಪದ-ಪರೀಕ್ಷಕ (spell-check-engine) ಎಂಜಿನ್‌ಗೆ ಅಳವಡಿಸಲು ಅನುವಾಗಲೆಂದು ಒಂದು ಹೊಸ ಸವಲತ್ತನ್ನೂ ಸೇರಿಸಲಾಗಿದೆ. ಇದೇ ರೀತಿ ಇನ್ನೂ ಹಲವು ಅನುಕೂಲತೆಗಳನ್ನು ಸೇರಿಸಲಾಗಿದ್ದು, ನಿಮಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನವನ್ನು 4.0 ಆವೃತ್ತಿಯಲ್ಲಿ ಮಾಡಲಾಗಿದೆ. ಈ ಲೇಖನವನ್ನು ಸಂಪೂರ್ಣ ಪದ-IME ಇಂದಲೇ ಬರೆಯಲಾಗಿದೆ. ಕನ್ನಡ-ಕೆ.ಪಿ.ರಾವ್‌ ಲೇಔಟ್‌ನ್ನು ನಾವು ಹೆಚ್ಚು ಬಳಸುತ್ತೇವೆ. ಹಾಗಂತ photetic ಲೇಔಟ್‌ ಪಕ್ಕ ಸರೀ ಇಲ್ಲ ಎಂದಲ್ಲ, ಎಲ್ಲವನ್ನೂ ಪರೀಕ್ಷಿಸಿ, ದೃಡಪಡಿಸಿಕೊಂಡ ಮೇಲೆಯೇ ತಂತ್ರಾಂಶವನ್ನು ಬಿಡುಗಡೆಮಾಡಲಾಗಿದೆ. ಧೈರ್ಯವಾಗಿ ಬಳಸಲು ಆರಂಬಿಸಿ. ತೊಂದರೆಗಳು ಎದುರಾದಲ್ಲಿ ನಮಗೆ ತಿಳಿಸಿ.

ಒಟ್ಟಾರೆ ಇಲ್ಲಿಯವರೆಗೆ ಎಲ್ಲಾ ಬೆಳವಣಿಗೆಗಳು ಪದ-ತಂತ್ರಾಂಶದ ಪರವಾಗಿಯೇ ಕೆಲಸ ಮಾಡಿದ್ದು, ಇದೀಗ ಕೇವಲ 45 ದಿನಗಳೊಳಗೆ 1000 ಡೌನ್‌ಲೋಡ್‌ಗಳನ್ನೂ ದಾಟಿದೆ. ಈಗ 2000 ದ ಗಡಿಯ ಗುರಿಯನ್ನು ಬೆನ್ನತ್ತಿದೆ. :) ಇಂತಹ ಶುಭ ಸುದ್ದಿಗೆ ಕಾರಣರಾದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೆರವಾದ ಸಮಸ್ತರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಲಿಚ್ಚಿಸುತ್ತೇವೆ.

ನಿಮ್ಮ ಪ್ರೀತಿಗೆ, ಪ್ರೋತ್ಸಾಕಕ್ಕೆ ಬಹುಶಃ ಯಾರಿಂದಲೂ ಬೆಲೆಕಟ್ಟಲಾದು. ಕವಿಗಳು-ಸಾಹಿತಿಗಳು, ಚಿತ್ರ ಕಲಾವಿದರು ಹೀಗೆ ಎಲ್ಲರೂ ಅದನ್ನೇ ಹೇಳುತ್ತಾರೆ. ಏನೆಂದರೆ ಅಭಿಮಾನಿಗಳ ಪ್ರೀತಿಯೇ ನಮ್ಮ ಆಸ್ತಿ ಎಂದು. ಅದನ್ನು ಎಷ್ಟರ ಮಟ್ಟಿಗೆ ಮನಃಪೂರ್ವಕವಾಗಿ ಹೇಳುತ್ತಾರೋ ತಿಳಿಯದು, ಆದರೆ ಖಂಡಿತ ಆ ಮಾತು ನೂರಕ್ಕೆ ನೂರು ಸತ್ಯ.

ಅಂತಹ ಪ್ರೀತಿಯನ್ನು ಮೊದಲು ತೋರಿಸಿದ್ದು ಈ ಚಿತ್ರ. ಹೌದು, ಫೇಸ್‌ಬುಕ್‌ನ ಧರ್ಮಗ್ರಂಥ ಪುಟದಿಂದ ಆರಂಭವಾದ ಈ ಜಾಹಿತಾತು(?), ನೂರಾರು ಜನ ಕನ್ನಡಿಗರ ಫೇಸ್‌ಬುಕ್‌ ಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ (Re-Share), ಅನೇಕ ಕನ್ನಡಿಗರಿಗೆ ಪರಿಚಯವಾಗಿದೆ. ಇದಕ್ಕೆ ಒಂದು ಉದಾಹಣೆ ಇಲ್ಲಿದೆ, ಇನ್ನೊಂದು ಇಲ್ಲಿದೆ ನೋಡಿ. (ಇಂತಹ ಇನ್ನೂ ಅನೇಕ ಶೇರ್‌ಗಳು Facebook ನಲ್ಲಿವೆ, ನಿಮಗೂ ಸಿಕ್ಕರೆ ನಮ್ಮೊಂದಿಗೂ ಹಂಚಿಕೊಳ್ಳಿ, ಹಾಗೂ ನೀವು ಸಹ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.)

ಇದನ್ನು ಸಿದ್ದಪಡಿಸಿದ ಸ್ನೇಹಿತರಿಗೆ ಕೃತಜ್ಞತೆಯನ್ನು ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ. ಈ ಮೊದಲ ಮೆಟ್ಟಿಲಿನ ಮಾತುಕತೆಗೆ ಇನ್ನೆಷ್ಟು ತಿಂಗಳು ಕಾಯಬೇಕಿತ್ತೋ ತಿಳಿಯದು, ಆದರೆ ನಿಮ್ಮ ಈ ಪ್ರಯತ್ನದಿಂದಾಗಿ, ಪದ ತಂತ್ರಾಂಶ 4.0 ಆವೃತ್ತಿ ರಿಲೀಸ್‌ ಆದ ಒಂದು ವಾರದಲ್ಲಿಯೇ ಮೊದಲ ಮಎಟ್ಟಿಲಿನ ಸಿಹಿ ಸುದ್ದಿ ಹಂಚಿಕೊಂಡಿದ್ದೇವೆ. ನಿಮಗೆ ಮತ್ತೊಮ್ಮೆ ನಮ್ಮ ಧನ್ಯವಾದಗಳು.

ಇಂತಿಪ್ಪ, ಇಷ್ಟು ಹೇಳಿ ಇ ಮಾತು-ಕತೆಯನ್ನು ಮುಗಿಸಲಾಗುತ್ತಿದೆ. ಪದ ತಂತ್ರಾಂಶ ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಆಶಯ, ಅದಕ್ಕೆ ನಿಮ್ಮ ಪ್ರೀತಿಯ ಶ್ರೀರಕ್ಷೆ ಸದಾ ಇರಲಿ ಎಂದು ಕೇಳುತ್ತಾ …ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ.

ಆ ದೀಪಾವಳಿ ಹಬ್ಬಕ್ಕೆ ಈಗಾಗಲೇ ಸಜ್ಜಾಗಿ ನಿಂತಿದ್ದೀರಿ ಎಂದು ಕಾಣುತ್ತದೆ. ಈಗಲೇ ಒಮ್ಮೆ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..ಪಠಾಕಿ ಸಿಡಿಸುವಾಗ ಸಾದ್ಯವಾದಷ್ಟು ಹುಶಾರಾಗಿರ್ರಿ ಎಂದು ತಿಳಿಸುತ್ತಾ…

ವಂದನೆಗಳೊಂದಿಗೆ…

Permanent link to this article: http://www.pada.pro/%e0%b2%92%e0%b2%82%e0%b2%a6%e0%b3%81-%e0%b2%af%e0%b2%b6%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%95%e0%b2%a5%e0%b3%86/

13 comments

Skip to comment form

 1. Prabhu R

  Congratulations for your sincere efforts, hard work and love towards development of kannada script.
  Let everybody make use of the same for their applications.

  God Bless you and give more strength to bring out such achievements in the days to come

  With Best Wishes

  Prabhu R

  1. @pada.pro

   ನಮಸ್ತೆ ಪ್ರಭುರವರೇ.
   ನಿಮ್ಮೆ ನಿಚ್ಚಿಗೆಯ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು ಎಂದು ಹೇಳಲು ಇಚ್ಚಿಸುತ್ತೇನೆ.
   ————————————————————
   Dear Prabhu,
   Thanks a ton for your encouraging words. and special thanks for your blessings.

   “ಆಡಿಸುವಾತನ ಕೈಚಳಕದಲಿ ಎಲ್ಲಾ ಅಡಗಿದೆ” :)

 2. ರೇಣುಕಾತನಯ

  ನುಡಿಯಲ್ಲಿ ಏಕಭಾಷೆ ಮತ್ತು ಯುನಿಕೋಡ್ ನಲ್ಲಿ ಟೈಪಿಸುವಾಗ ‘ಅರ್ಕ’ ಒತ್ತು ತುಂಬಾ ಸಮಸ್ಯೆ ಕೊಡ್ತಿತ್ತು. ‘ಪದ’ದಲ್ಲಿ ಪರವಾಗಿಲ್ಲ, ನುಡಿ (k.p.rao) ಕೀಬೋರ್ಡ್ ಬಳಸಿ ಏಕಭಾಷೆಯಂತೆಯೇ ಟೈಪಿಸಬಹುದು. ಆದ್ರೂ ಅರ್ಧಾಕ್ಷರ, ಧೀರ್ಘಾಕ್ಷರಗಳ ಮುಂದೆ ‘ಅರ್ಕಾ’ ಒತ್ತನ್ನು ಬಳಸಬೇಕಾದಲ್ಲಿ ಸ್ವಲ್ಪ ಸುತ್ತುಬಳಸಿಯೇ ಬರಬೇಕಾಗಿದೆ.

  1. @pada.pro

   ನಮಸ್ತೆ,
   ನಿಮ್ಮ ಅನಿಸಿಕೆಯನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.
   ಅರ್ಧಾಕ್ಷರ, ಧೀರ್ಘಾಕ್ಷರಗಳ ಇವುಗಳಲ್ಲಿ ಏನು ವಿಶೇಷ?
   ಏಕೆ ಕಷ್ಟವಾಗುತ್ತಿದೆ? ಶಿಪ್ಟ್ ಹಿಡಿದು ‘ಎಪ್’ ಒತ್ತಿ
   ಉದಾಹರಣೆಗೆ ಧಾ ಮುಂದೆ Shift+F ಒತ್ತಿ ನೋಡಿ.

 3. shrinivas pandurarangi

  ವಂದನೆಗಳು,

  ನನ್ನ ಮೇಲ್ ಗೆ ತಮ್ಮಿಂದ ಬಂದ ಉತ್ತರದಂತೆ ಪ್ರಯತ್ತಿಸಿದೆ. ಆದರೆ ಎಕ್ಚೆಲ್ ನಲ್ಲಿ ಪದ ಟೈಪಿಸಲು ಸಾದ್ಯವಾಗಿದೆ. ಆದರೆ ವರ್ಡನಲ್ಲಿ ಟೈಪಿಸಿದರೆ ಬರೀ ಬೌಕಗಳೇ ಬರುತ್ತಿವೆ. ಕಾರಣ ತಿಳಿಯುತ್ತಿಲ್ಲ. ಪರಿಹಾರ ಸೂಚಿಸಿ
  ಪದ ಒಂದು ಅದ್ಭುತ ಅನುಭವ ನೀಡುತಿದೆ. ಪದ ಉಪಯೋಗಿಸುವವರು ನಮ್ಮ ನಮ್ಮಲ್ಲಿಯೇ ಹೊಸ ಹೊಸ ಪ್ರಯೋಗಗಳ ಅನಿಸಿಕೆಗಳ ವಿನಿಮಯ ಮಾಡುವಂತಾದರೆ ಉತ್ತಮ
  ಧನ್ಯವಾದಗಳು

  ಶ್ರೀನಿವಾಸ

  1. @pada.pro

   ನಮಸ್ತೆ ಶ್ರೀನಿವಾಸ್,
   ವರ್ಡ್ನಲ್ಲಿ ಸಮಸ್ಯೆ ಇದೆ. ನೀವು Window XP ಉಪಯೋಗಿಸುದ್ದೀರಿ ಎಂದು ಭಾವಿಸುತ್ತೇವೆ.
   ಫಾಂಟ್‌ನ Arial MS Unicode ಗೆ ಬದಲಿಸಿ, ಪ್ರಯತ್ನಿಸಿ ನೋಡಿ. ಅಷ್ಟೇನು ಚೆನ್ನಾಗಿದೆ ಎಂದು ಹೇಳಲಾಗದೇ ಹೋದರೂ
   ತಕ್ಕ ಮಟ್ಟಿಗೆ ಸರಿ ಬರುತ್ತದೆ.

  2. ವಿಕಾಸ್

   shrinivas pandurarangi , ನೀವು Window XP ಉಪಯೋಗಿಸುದ್ದೀರಿ ಎಂದನಿಸುತ್ತದೆ. ಅದರ ಸೆಕೆಂಡ್ ಎಡಿಶನ್ ವರೆಗೆ ಭಾರತೀಯ ಲಿಪಿಗಳಿಗೆ default ಬೆಂಬಲ ಇರುವುದಿಲ್ಲ. ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಭಾಷೆ ಸೇರಿಸಿ, ವಿಂಡೋಸ್ ಸಿ.ಡಿ. ಹಾಕಿ ಫಾಂಟುಗಳನ್ನು ಕಾಪಿ ಮಾಡಿಕೊಳ್ಳಬೇಕಾಗುತ್ತದೆ. ಆಗ ಚೌಕ ಚೌಕಗಳ ಬದಲು ಕನ್ನಡ ಅಕ್ಷರಗಳು ಕಾಣುತ್ತವೆ.

 4. s.p.ravi prakash

  pada kosha kannadigarigae odagisikottiruvudakkae thumba dhanyavadagalu mundhae ella kannadigaru idhannu sadhupayoga balasikoollali endu bayasuttaenae hagu namma kannada vishvadyantha pasarisali endu matthommae haraisottanae

  1. @pada.pro

   ನಮಸ್ತೆ ರವಿಯವರೇ
   ನಿಮ್ಮ ಅಭಿಪ್ರಾಯವನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

 5. mukundachiplunkar

  pada is good like kannada slate which i was using till now.thanks .

 6. Savious Crasta

  ತುಂಬಾನೇ ಸಂತೋಷ. ಬರ ಬೇಕು,..ಹೊಸ-ಹೊಸ ತಂತ್ರಾಂಶಗಳು ಬರ ಬೇಕು, ಕನ್ಡಡ ನುಡಿಯ ಎಲ್ಲೆಂದರಲ್ಲಿ ಹರಡಿಸ ಬೇಕು. ನನಗೆ ತುಂಬಾನೇ ಇಷ್ಟವಾಯಿತು. ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ, ಶುಭ ಹಾರೈಸುವೆ ನಿಮ್ಮ ಯಶಸ್ಸಿಗೆ..ಜೈ ಸಿರಿ ಕನ್ನಡ ಗೆಲ್ಗೆ.

 7. ರಂಗಣ್ಣ ಎಂ.

  ತುಂಬಾ ಉಪಯುಕ್ತವಾದ ತಂತ್ರಾಂಶ ಧನ್ಯವಾದಗಳು, ಸರ್,

 8. B Vadiraja rao

  thank you very much for yr invention on kannada lipi in computer typing system , very much helpful for my feild ,once again thanks .

Leave a Reply

Your email address will not be published. Required fields are marked *